ಜಿಲ್ಲೆ

ಠಾಣೆಯಲ್ಲಿ ವೃದ್ಧನ ಮೇಲೆ ನಾಯಿ ದಾಳಿ

Mangaluru - Nishantha Narayana

ವಿಟ್ಲ: ಠಾಣೆಗೆ ದೂರು ನೀಡಲು ಹೋದ ವೃದ್ಧರೊಬ್ಬರ ಮೇಲೆ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.

ವಿಟ್ಲ ಪೊಲೀಸ್ ಠಾಣೆಗೆ ಕರೋಪಾಡಿ ಗ್ರಾಮದ ಲಕ್ಷ್ಮಣ ಅವರು ವೈಯಕ್ತಿಕ ವಿಚಾರಕ್ಕೆ ದೂರು ನೀಡಲು ತೆರಳಿದ್ದರು. ಠಾಣೆಯ ರಕ್ಷಣೆಗಾಗಿ ಸಾಕಲಾದ ನಾಯಿ ಏಕಾಏಕಿ ದಾಳಿ ಮಾಡಿದೆ. ಇದರಿಂದ ಅವರ ಕಾಲಿಗೆ ಗಾಯವಾಗಿದೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಹಾಕುವ ಬಿಸ್ಕೆಟ್ ಹಾಗೂ ಊಟಕ್ಕೆ ನಾಯಿ ಠಾಣೆಯಲ್ಲಿ ಬೀಡುಬಿಟ್ಟಿದ್ದು, ಕೆಲದಿನಗಳಿಂದ ಠಾಣೆಗೆ ಬರುತ್ತಿರುವವರ ಮೇಲೆ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮೇಲಾಽಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.