ಸಾಂದರ್ಭಿಕ ಚಿತ್ರ 
ಜಿಲ್ಲೆ

ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರ! ಆರೋಪಿ ಪೊಲೀಸ್​ ವಶಕ್ಕೆ...dog abuse incident in bengaluru

ಬೆಂಗಳೂರು:  ( dog abuse incident in bengaluru ) ಮೂಕ ಪ್ರಾಣಿ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ, ರಕ್ತ ಬರುವಂತೆ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಜಯನಗರದ ಸುತ್ತ ಮುತ್ತ ವಿದ್ಯಾ ಎಂಬುವ ಮಹಿಳೆ ಶ್ವಾನಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ನಿನ್ನೆ (ಮಾರ್ಚ್​ 13) ರಾತ್ರಿ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಆ ವೇಳೆ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಬೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ಕುಡಲೇ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ.

ಇಂದು ಸಂಜೆ ಅದೇ ಶಾಲಿನಿ ಮೈದಾನದ ಬಳಿ ಶ್ವಾನಪ್ರೀಯರು ತೆರಳಿದ್ದಾರೆ. ಈ ವೇಳೆ ಅದೇ ವ್ಯಕ್ತಿ ಕಂಡಿದ್ದಾನೆ. ಬಳಿಕ ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.