ಜಿಲ್ಲೆ

ನಿಯಂತ್ರಣ ತಪ್ಪಿದ ಕಾರಿನಿಂದ ಸರಣಿ ಅಪಘಾತ

ಶಿವರಾಜ.ಎಂ

ದೊಡ್ಡಬಳ್ಳಾಪುರ: ನಗರದ ಲಾವಣ್ಯ ಶಾಲೆ ಸಮೀಪದ ವೃತ್ತದಲ್ಲಿ ನಿಯಂತ್ರಣ ಕಳದುಕೊಂಡ ಕಾರಿನಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆಗೆ ಗಾಯಗಳಾಗಿವೆ.
ಬೈಕ್ ಓಡಿಸುತ್ತಿದ್ದ ಪ್ರತಿಮಾ(30) ಗಾಯಾಳು.
ಅತಿವೇಗ ಹಾಗೂ ಅಜಾಗರೂಕತೆಯಿಂದಾಗಿ ತುಮಕೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ಓಡಿಸುತ್ತಿದ್ದ ಮಹಿಳೆ ಪ್ರತಿಮಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತವೆಸಗಿದ ಕಾರು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದು, ಕಾರು ಚಾಲಕನ ಪತ್ತೆ ನಡೆಸುತ್ತಿದ್ದಾರೆ.