ಮಡಿಕೇರಿ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಆಶ್ರಯದಲ್ಲಿ ಜಿಲ್ಲಾ ಮಟ್ಟದ ’ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟ’ ಏ೨೩ರಂದು ಹೆಬ್ಬಾಲೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೮.೩೦ ಗಂಟೆಗೆ ಹೆಬ್ಬಾಲೆ ಬನಶಂಕರಿ ಅಮ್ಮನವರ ದೇವಸ್ಥಾನದಿಂದ ಸಂಯುಕ್ತ ಪದವಿ ಪುರ್ವ ಕಾಲೇಜು ಮೈದಾನದವರೆಗೆ ಕ್ರೀಡಾ ಜ್ಯೋತಿಯ ಬೈಕ್ ರ‌್ಯಾಲಿ ನಡೆಯಲಿದೆ. ನಂತರ ಕ್ರೀಡಾಕೂಟ ಆರಂಭವಾಗಲಿದೆ. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ(ಮೈದಾನ ಶುಲ್ಕ ರೂ.೧೦೦೦), ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ(ಮೈದಾನ ಶುಲ್ಕ ೩೦೦), ಮಹಿಳೆಯರಿಗೆ ಥ್ರೋಬಾಲ್ ಆಯೋಜಿಸಲಾಗಿದೆ. ಆಸಕ್ತರು ಏ೧೮ರೊಳಗೆ ತಂಡದ ಹೆಸರು ನೊಂದಾಯಿಸಿಕೊಳ್ಳಬೇಕು. ಶೆಟಲ್(ಡಬಲ್ಸ್)(ಮೈದಾನ ಶುಲ್ಕ ೫೦೦) ಪುರುಷರಿಗೆ ಏ೧೭ರಂದು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಹಿಂಭಾಗ ಜಂಪ್ ಸ್ಮ್ಯಾಶ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅಂಗನವಾಡಿ, ಎಲ್‌ಕೇಜಿ, ಯುಕೆಜಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಕುಪ್ಪಳಿಸುವುದು, ೧-೩ರನೇ ತರಗತಿಯವರೆಗೆ ೫೦ ಮೀಟರ್ ಓಟ, ೪-೫ನೇ ತರಗತಿವರೆಗೆ ೧೦೦ ಮೀಟರ್ ಓಟ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಿಧಾನ ಸೈಕಲ್ ಚಾಲನೆ, ದಿವ್ಯಾಂಗಿಗಳಿಗೆ ಟೆನ್ನಿಸ್ ಬಾಲ್ ಎಸೆತ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪುರುಷ ಮತ್ತು ಮಹಿಳೆಯರಿಗೆ ನಿಧಾನ ಬೈಕ್ ಚಾಲನೆ(ಸಾಮನ್ಯ), ಭಾರದ ಗುಂಡು ಎಸೆತ(ಪುರುಷ ಮತ್ತು ಮಹಿಳೆಯರಿಗೆ), ರಂಗೋಲಿ ಸ್ಪರ್ಧೆ(ಸಾಮಾನ್ಯ) ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೋಕ್ಷಿಕ್ ರಾಜ್ ೯೮೮೦೧೮೦೦೫೫, ಮಮತ ಸತೀಶ್ ೯೪೪೮೫೮೭೬೮೮ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.