ದೊಡ್ಡಪ್ಪ ಅಪ್ಪ ಸ್ವತಂತ್ರ ಪಿಯು ಕಾಲೇಜಿನಲ್ಲಿ ಸೈನ್ಸ್ ಅಕಾಡೆಮಿ ಉದ್ಘಾಟಿಸಿದ ಅನುಪಮ್ ಅಗ್ರವಾಲ್
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ನಿಖರವಾದ ನಿರ್ಧಿಷ್ಟ ಗುರಿ ಇಟ್ಟುಕೊಂಡು ಮುನ್ನುಗ್ಗಿದರೆ ಸಾಧನೆ ಮಾಡಿ ಯಶಸ್ವಿ ವ್ಯಕ್ತಿಯಾಗಬಹುದು ಎಂದು ಈಶಾನ್ಯ ವಲಯ ಡಿಐಜಿ ಅನುಪಮ್ ಅಗ್ರವಾಲ್ ಹೇಳಿದರು.
ಇಲ್ಲಿನ ಶರಣ ನಗದಲ್ಲಿರುವ ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿ ಪೂರ್ವ ವಿe್ಞÁನ ವಿದ್ಯಾಲಯದಲ್ಲಿ ಗುರುವಾರ ಜರುಗಿದ ಸೈನ್ಸ್ ಅಕಾಡೆಮಿ ಉದ್ಘಾಟನೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹತ್ತು ವರ್ಷ ಶ್ರಮ ಪಟ್ಟಾಗ ಭವಿಷ್ಯದ ೭೦ ವರ್ಷ ಸುಖಕರವಾಗಿಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿ ತಾಳ್ಮೆ, ಕಲಿಕಾ ಆಸಕ್ತಿ, ಸಾಧನೆಯ ಬಗ್ಗೆ ದೃಢವಾದ ನಿರ್ಧಾರ, ಕಠಿಣ ಪರಿಶ್ರಮಪಟ್ಟರೆ ಎಂತಹ ಕಷ್ಟವನ್ನು ಮೆಟ್ಟಿನಿಂತು ಸಾಧನೆ ಮಾಡಬಹುದು ಎಂದು ಅಗ್ರವಾಲ್ ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಂಘ ಸುಮಾರು ೧೦೦ ವರ್ಷಗಳಿಂದ ವಿದ್ಯಾದಾನ ಅನ್ನದಾನ ಬಡ ನಿರ್ಗತಿಗರಿಗೆ ಆಸರೆ ಕೊಡುವುದರ ಮುಖಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನುಸಮಾಜಕ್ಕೆ ಕೊಡುಗೆಯಾಗಿ ನೀಡಿದಂತಹ ಸಂಸ್ಥೆಯಾಗಿದೆ ಎಂದರು.
ಶರಣಬಸವೇಶ್ವರ ಕಾಲೇಜಿನ ಪ್ರಾಚಾರ್ಯರಾದ ದೊಡ್ಡಪ್ಪ ಅಪ್ಪ ಕಾಲೇಜಿನ ನಿರ್ದೇಶಕ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸು ಕಂಡು ಗುರಿ ಇಟ್ಟುಕೊಂಡು ಐಎಎಸ್,ಐಪಿಎಸ್ ಅಧಿಕಾರಿಗಳಾಗಲು ಕರೆ ನೀಡಿದರು. ಅಗರವಾಲ್ ಅವರು ೩೧ನೇ ವರ್ಷಕ್ಕೆ ಡಿಐಜಿ ಆಗಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಸಾಧನೆ ಮಾಡಿದ ವಿದ್ಯಾರ್ಥಿಗಳಾದ ನಾಗೇಶ ಕಲಶೆಟ್ಟಿ, ಆದಿತ್ಯ ನಾಗೂರ, ಭೂಮಿಕಾ ವಿಠ್ಠಲï ಅವರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ವಿನೋದಕುಮಾರ ಪತಂಗೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಆನಂದ ಸಿದ್ದಾಮಣಿ ಮತ್ತು ಪ್ರೊ.ಭಾಗ್ಯವತಿ ನಿರೂಪಿಸಿದರು. ಸಂತೋಷ ಬೋರಟಿ ಸ್ವಾಗತಿಸಿದರು. ನಿತೇಶ ಮೋದಿ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು