ಜಿಲ್ಲೆ

ಮುತ್ಯಾಲಮ್ಮ ದೇಗುಲದಲ್ಲಿ ನವಚಂಡಿಕಾ ಯಾಗ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಇಲ್ಲಿನ ಶಾಂತಿ ನಗರದ ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿಯ ಮಹಾಕುಂಬಾಭಿಷೇಕ ಮಂಡಲ ಪೂಜೆ ಅಂಗವಾಗಿ ಸೋಮವಾರ ದೇವಸ್ಥಾನ ಆವರಣದಲ್ಲಿ ನವ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿತ್ತು.
ಈ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಮಾಡಿ, ವಿವಿಧ ಪೂಜೆ ನೆರವೇರಿಸಲಾಯಿತು. ಲೋಕ ಕಲ್ಯಾಣಾರ್ಥವಾಗಿ ಎರಡು ದಿನಗಳ ಕಾಲ ನಡೆದ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಪುಣ್ಯಾಹ ಪಂಚಗವ್ಯ ದೇವಿ ಅನುಜ್ಞವಾಸ್ತು ಶಾಂತಿ, ಚಂಡಿಕಾ ಕಳಸ ಸ್ಥಾಪನೆ, ನವಾಕ್ಷಾರಿ ಶಾಂತಿ ಪೂಜೆ, ದಂಪತಿ, ಕನ್ಯಕಾ, ಸುಮಂಗಲಿ ಪೂಜೆ ಹಾಗೂ ವಿವಿಧ ದೋಷ ಪರಿಹಾರ ಯಾಗ ನೆರವೇರಿಸಲಾಯಿತು.
ಭಕ್ತರಿಗೆ ಅನ್ನಸಂತರ್ಪ