ಜಿಲ್ಲೆ

ಜನರಿಗಾಗಿಯೇ ಜೀವನ ಮುಡಿಪಾಗಿಟ್ಟವರು ಗದ್ದರ್

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಸರ್ಕಾರಿ ಕೆಲಸ ತೊರೆದು, ಭ್ರಷ್ಟ ಆಡಳಿತ ವ್ಯವಸ್ಥೆ ಸರಿಪಡಿಸಲು ಮತ್ತು ಜನಸಾಮಾನ್ಯರ ಪರವಾಗಿ ಹೋರಾಟಕ್ಕೆ ತೊಡಗಿಸಿಕೊಂಡ ಕ್ರಾಂತಿಕಾರಿ ಕವಿ ಗದ್ದರ್ ಎಂದು ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ ಬಣ್ಣಿಸಿದರು.
ನಗರದ ಕಜಾಪ ಸಭಾಂಗಣದಲ್ಲಿ ಕನ್ನಡ ಜಾಗೃತಿ ಪರಿಷತ್ ಮತ್ತು ಪ್ರಗತಿ ಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ದಲಿತ ಹೋರಾಟಗಾರ ಗದ್ದರ್‌ಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ವ್ಯವಸ್ಥೆಯ ವಿರುದ್ಧ ಹೋರಾಡುವಂಥ ಸಮಯದಲ್ಲಿ ಜನರನ್ನು ಗಾಯನ, ಹಾಡುಗಳಿಂದಲೇ ಒಗ್ಗೂಡಿಸಿದ್ದರು. ಬೇರು ಸಮೇತ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಶ್ರಮಿಸಿದ್ದರು. ಆಸರೆ ಇಲ್ಲದ ಸಮುದಾಯಕ್ಕೆ ಹೋರಾಟದ ಮೂಲಕ ಆಶ್ರಯವಾಗಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಮುಂಚೂಣಿಯಲ್ಲಿದ್ದರು. ಆಳುವ ವರ್ಗದ ಜನತೆ ಪ್ರಭಾವಿ, ಮೇಲ್ವರ್ಗದ ಜಾತಿಗಳನ್ನು ಒಲೈಕೆ ಮಾಡುವುದರಲ್ಲಿ ನಿಸ್ಸಿಮರಾಗಿದ್ದರೂ ಅಂತಹವರ ವಿರುದ್ಧವೂ ಹೋರಾಟ ಮಾಡಿದ್ದರು ಎಂದರು.
ಸಿಪಿಐಎಂ ಮುಖಂಡ ಚಂದ್ರತೇಜಸ್ವಿ ಮಾತನಾಡಿ, ಜೀವನದುದ್ದಕ್ಕೂ ಪ್ರತಿಕ್ಷಣವೂ ಹೋರಾಟದ ಮನೋಭಾವ ರೂಪಿಸಿಕೊಂಡಿದ್ದರು. ನಕ್ಸಲ್ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಹಲವು ಗುಂಡೇಟು ತಿಂದಿದ್ದಾರೆ. ಒಂದು ಗುಂಡು ಸ್ಪೈನಲ್ ಕಾರ್ಡ್‌ನಲ್ಲಿ ಸೇರಿಕೊಂಡಿದ್ದರಿಂದ ಜೀವನ ಪೂರ್ತಿ ಗುಂಡಿನ ಜತೆ ಸಾಗಿದ್ದರು. ಅವಿಭಜಿತ ಆಂಧ್ರಪ್ರದೇಶದ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದರು ಎಂದರು.


ಹಲವು ವರ್ಷಗಳ ಹಿಂದೆ ತಾಲೂಕಿನ ಹಲವು ಪ್ರಗತಿ ಪರ ಸಂಘಟನೆಗಳು ಹೈದರಾಬಾದ್‌ನಲ್ಲಿ ಗದ್ದರ್ ಅವರನ್ನು ಭೇಟಿಯಾಗಿದ್ದೇವು. ಅಂದಿನ ಜೀತಾ ಪದ್ಧತಿ, ತುಳಿತಕ್ಕೊಳಗಾದ ಜನತೆ, ಸಣ್ಣ ಹಿಡುವಳಿದಾರರ ಪರವಾಗಿ ಹೋರಾಟ ಮಾಡಿ, ನ್ಯಾಯ ಕೊಡಿಸಿದ್ದರು. ಗದ್ದರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ, ಪ್ರಶ್ನಿಸುವ ಮನೋಭಾವ ತನ್ನಿಂತಾನೆ ಬೆಳೆಯುತ್ತದೆ.
ಕನ್ನಡ ಪಕ್ಷದ ಮುಖಂಡ ಸಂಜೀವ್ ನಾಯಕ್