ಜಿಲ್ಲೆ

ಮೈಸೂರಿನಲ್ಲಿ ಫೆ.3, 4ರಂದು ಸಾಕ್ಷ್ಯಚಿತ್ರೋತ್ಸವ

ಮೈಸೂರು: ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ಭಾರತೀಯ ಚಿತ್ರ ಸಾಧನ ಸಹಯೋಗದಲ್ಲಿ ಫೆ.3 ಮತ್ತು 4 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷೃ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಸಂಯೋಜಕ ಎಂ.ಆರ್.ಹರೀಶ್ ತಿಳಿಸಿದರು.

ಫೆ.3ರಂದು ಬೆಳಗ್ಗೆ 10 ಗಂಟೆಗೆ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಚಿತ್ರೋತ್ಸವವನ್ನು ರಂಗಕರ್ಮಿ ಪ್ರಕಾಶ್ ಬೆಳವಾಡಿ ಉದ್ಘಾಟಿಸಲಿದ್ದು, ಚಿತ್ರನಟಿ ಹರಿಪ್ರಿಯಾ, ಕುಲಪತಿ ಡಾ.ಶರಣಪ್ಪ ವಿ.ಹಲಸೆ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿತ್ರೋತ್ಸವ ಸಂಬಂಧ ಇತ್ತೀಚೆಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ದೇಶ ಹಾಗೂ ವಿದೇಶಗಳಿಂದ 300ಕ್ಕೂ ಹೆಚ್ಚು ಕಿರುಚಿತ್ರ, ಸಾಕ್ಷೃಚಿತ್ರಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಆಯ್ಕೆಯಾದ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.

ಸಹ ಸಂಯೋಜಕರಾದ ಪದ್ಮಾವತಿ ಎಸ್.ಭಟ್, ಜಿ.ಆರ್.ಚೇತನ್ ಇದ್ದರು.