ಜಿಲ್ಲೆ

ನಗುಮೊಗದ ಸೇವೆಯಿಂದ ರೋಗಿ ಗುಣಮುಖ : ಡಾ.ರಾಮಚಂದ್ರ ಕೆ.ಭಾಗ್ವತ್ ಪ್ರತಿಪಾದನೆ

ಸೌಮ್ಯ ಆರ್

ಉಳ್ಳಾಲ: ಚಿಕಿತ್ಸೆಗೆ ಬಂದ ರೋಗಿಗಳ ಜತೆ ಮುಕ್ತವಾಗಿ ನಗುಮುಖದಿಂದ ಮಾತನಾಡುವುದರಿಂದ ರೋಗಿಗೆ ವೈದ್ಯರ ಮೇಲೆ ಅಭಿಮಾನ ಉಂಟಾಗುತ್ತದೆ. ಆ ಮೂಲಕ ಭರವಸೆ ಬೆಳೆದು ಮಾನಸಿಕವಾಗಿ ಶೇ.50ರಷ್ಟು ಗುಣಮುಖನಾಗುತ್ತಾನೆ ಎಂದು ಸಾಗರದ ಡಾ.ರಾಮಚಂದ್ರ ಕೆ.ಭಾಗ್ವತ್ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆ ವತಿಯಿಂದ ಎ.ಬಿ.ಎಸ್.ಎಂ.ಐ.ಡಿ.ಎಸ್.ನ ಆವಿಷ್ಕಾರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ವೈದ್ಯರ ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಿಟ್ಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ಸಹ ಕುಲಾಧಿಪತಿ ಪ್ರೊ.ಎಂ.ಶಾಂತಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದ ವಿವಿಧ ದೇಶಗಳಲ್ಲಿ ವೈದ್ಯರ ದಿನ ಆಚರಿಸಲಾಗುತ್ತಿದೆ. ಅದೇ ರೀತಿ ಜು.1ರಂದು ವೈದ್ಯರೂ ಮುಖ್ಯಮಂತ್ರಿ ಆಗಬಹುದು ಎಂಬುದನ್ನು ತೋರಿಸಿ ಕೊಟ್ಟ ಸಾಧಕ ಡಾ.ಬಿ.ಸಿ.ರಾಯ್ ಜನ್ಮ ದಿನವನ್ನು ವೈದ್ಯರ ದಿನವಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಕುಟುಂಬ ವೈದ್ಯರಾದ ಡಾ.ಎಂ.ನೀಲಯ್ಯ ಗಂಜಿಮಠ, ಡಾ.ರಾಮಚಂದ್ರ ಐತಾಳ್ ಹೆಬ್ರಿ, ಸಾಗರದ ಡಾ.ರಾಮಚಂದ್ರ ಕೆ. ಭಾಗ್ವತ್ ಹಾಗೂ ಕ್ಷೇಮಾದ ನಿವೃತ್ತ ಮಕ್ಕಳ ತಜ್ಞೆ ಡಾ.ವಿಜಯ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ವೈಸ್ ಡೀನ್ ಡಾ.ಸುಕನ್ಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕ್ಷೇಮ ಡೀನ್ ಡಾ.ಸಂದೀಪ್ ರೈ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ, ಮಕ್ಕಳ ತಜ್ಞ ಡಾ.ಸುಮಂತ್ ಬೆಳ್ಳಿಪ್ಪಾಡಿ, ಡಾ.ಗಿರಿಧರ್ ಹಾಗೂ ಡಾ.ಶ್ರೀಚರಿತ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಎಲುಬು ಹಾಗೂ ಮೂಳೆ ರೋಗ ತಜ್ಞ ಡಾ.ಸಿದ್ದಾರ್ಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವೈದ್ಯಕೀಯ ವೃತ್ತಿಗೆ ಕಾಲಿಟ್ಟ ಬಳಿಕ ನಮ್ಮ ಜ್ಞಾನ, ಕೌಶಲ ವೃದ್ಧಿ ಮುಖ್ಯ. ಆದರೆ ಅದಕ್ಕಿಂತಲೂ ನಮ್ಮನ್ನು ಸಾಕಿ ಬೆಳೆಸಿದ ಪಾಲಕರನ್ನು ಹಾಗೂ ಶಿಕ್ಷಣ ನೀಡಿದ ಸಂಸ್ಥೆಯ ಕೊಡುಗೆಯನ್ನು ಎಲ್ಲ ಕಾಲಕ್ಕೂ ನೆನಪಿಟ್ಟುಕೊಳ್ಳುವುದು ಮುಖ್ಯ. ಡಾ.ವಿಜಯ ಶೆಣೈ, ಕ್ಷೇಮಾದ ನಿವೃತ್ತ ಮಕ್ಕಳ ತಜ್ಞೆ https://www.vijayavani.net/umbrella-distribution-to-school-and-college-students https://www.vijayavani.net/free-book-distribution-%e0%b2%ae%e0%b3%80%e0%b2%a8%e0%b3%81%e0%b2%97%e0%b2%be%e0%b2%b0%e0%b2%b0-%e0%b2%b8%e0%b2%b9%e0%b2%95%e0%b2%be%e0%b2%b0%e0%b2%bf-%e0%b2%b8%e0%b2%82%e0%b2%98-%e0%b2%aa