ಬೋಜರಾಜ್ 
ಜಿಲ್ಲೆ

ಮಂಗಳೂರಿನ ಭೋಜರಾಜ್‌ಗೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್

ಮಂಗಳೂರು: ಮಂಗಳೂರು ಪಾವೂರು ಇನೋಳಿ ನಿವಾಸಿ  ಭೋಜರಾಜ್ ಅವರು ಸಲ್ಲಿಸಿದ ವೈಜ್ಞಾನಿಕ ಸಂಶೋಧನಾ ಮಹಾಪ್ರಬಂದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ಪಿಎಚ್‌ಡಿ(ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.

ಇವರು ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ರಾಸಾಯನಶಾಶ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಮೈಕಲ್‌ರಾಜಮತಿ ಅವರ ಮಾರ್ಗದರ್ಶನದಲ್ಲಿ ‘ಎ ಸ್ಟಡಿ ಆನ್ ಆ್ಯನಿಯೊನಿಕ್ ಕ್ಲೋಸ್, ಮೆಗ್ನೀಸಿಯಂ, ಅಲ್ಯುಮೀನಿಯಂ ಲೇಯರ್ಡ್ ಡಬಲ್ ಹೈಡ್ರಾಕ್ಸೈಡ್ ಆ್ಯಂಡ್ ನಿಕ್ಕಲ್ ಝಿಂಕ್ ಹೈಡ್ರಾಕ್ಸಿ ಸಾಲ್ಟ್’ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.  ಭೋಜರಾಜ್ ಅವರು ಮಂಗಳೂರು ಜೆಪ್ಪುಬಪ್ಪಾಲ್ ನಿವಾಸಿ ಉಪನ್ಯಾಸಕಿ ಅಂಕಿತಾ ಅವರ ಪತಿ, ಪಾವೂರು ಮಜ್ಜಿಕಟ್ಟೆ ನಿವಾಸಿ ಪ್ರೇಮ ಅವರ ಪುತ್ರ. ಇವರು ಮಚ್ಚಿನದ ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆ, ವಿವಿ ಕಾಲೇಜು ಮಂಗಳೂರು ಇಲ್ಲಿ ವಿಜ್ಞಾನ ಪದವಿ, ಮಂಗಳೂರು ವಿವಿಯಲ್ಲಿ ಕೈಗಾರಿಕಾ ರಸಾಯಣಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವು ಪಡೆದಿದ್ದು, ಮಂಗಳೂರು ಅಶೋಕನಗರದಲ್ಲಿರುವ ಶ್ರೀ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಹಿರಿಯ ನಿಲಯಾರ್ಥಿಯಾಗಿದ್ದರು.