ಪುತ್ತೂರು ಗ್ರಾಮಾಂತರ: ರಾಜ್ಯಶಾಸ್ತ್ರ ಉಪನ್ಯಾಸಕ ಕಿರಣಚಂದ್ರ ರೈ ಬಿ.ಬಂಟೆಕಲ್ಲು ಅವರಿಗೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಕಿರಣ್‌ಚಂದ್ರ ರೈ ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ ಡಾ.ಆನಂದ ಗೌಡ ಮಾರ್ಗದರ್ಶನದಲ್ಲಿ ಮಂಡಿಸಿರುವ ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿ ತತ್ವಗಳ ಅನುಷ್ಠಾನದ ವಿಶ್ಲೇಷಣೆ: ವಿಶೇಷವಾಗಿ ಪುತ್ತೂರಿಗೆ ಸಂಬಂಧಿಸಿದಂತೆ ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಬಂಟೆಕಲ್ಲು ವೆಂಕಪ್ಪ ರೈ ಮತ್ತು ಮಮ್ಮಕ್ಕೆ ರೈ ದಂಪತಿ ಪುತ್ರ ಕಿರಣ್‌ಚಂದ್ರ ರೈ ಪ್ರಸ್ತುತ ಬೆಟ್ಟಂಪಾಡಿ ಮತ್ತು ಸವಣೂರಿನ ವಿದ್ಯಾರಶ್ಮಿ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.