ಜಿಲ್ಲೆ

ಶಿರಸಿಯ ವೈದ್ಯ ಡಾ.ಗಜಾನನ ಭಟ್‌ ಅವರನ್ನು ತಕ್ಷಣ ಬಿಡುಗಡೆ ಮಾಡಿ

Uttara Kannada - Subash Hegde

ಕಾರವಾರ: ಶಿರಸಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ ಅವರ ವರ್ಗಾವಣೆಯಾಗಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಕೆಡಿಪಿ ಸಭೆಯಲ್ಲಿ ಒತ್ತಾಯಿಸಿದರು.

ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಎರಡು ಗುಂಪುಗಳಾಗಿವೆ. ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹಾಲಿ ಆಡಳಿತ ವೈದ್ಯಾಧಿಕಾರಿಯನ್ನು ವರ್ಗಾಯಿಸಿದರೆ, ಬೇರೆ ವೈದ್ಯರು ಬರಲು ಸಿದ್ಧರಿದ್ದಾರೆ ಎಂದರು.
10 ವರ್ಷ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ವರ್ಗಾಯಿಸುವ ನಿಯಮವನ್ನು ಸರ್ಕಾರ ಕೈಗೊಂಡಿದೆ. ಅದಕ್ಕೆ ನಾವು ಬದ್ಧವಾಗಿದ್ದೇವೆ. ಈಗ ಇರುವ ಅಧಿಕಾರಿಯ ಸ್ಥಳಕ್ಕೆ ಬೇರೆಯವರು ಬಾರದೇ ಇವರನ್ನು ರಿಲೀವ್ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.