ದಾವಣಗೆರೆ: ರೋಗಿಗಳಿಗೆ ಸೂಕ್ತ ಸೇವೆ ನೀಡುವಲ್ಲಿ ವಿಫಲವಾದ್ರೆ ಸಸ್ಪೆಂಡ್ ಮಾಡುವುದಾಗಿ ಜಿಲ್ಲಾಸ್ಪತ್ರೆಯ ಡಿಎಸ್‌ಗೆ ಉಸ್ತುವಾರಿ ಸಚಿವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ವೇಟಿಂಗ್ ಹಾಲ್‌ನಲ್ಲಿ ಕಾಯುತ್ತಿದ್ದ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ರೋಗಿಗಳನ್ನು ಕಂಡು ವೈದ್ಯರು ಗರಂ ಆದರು. ಇದನ್ನೂ ಓದಿರಿ ಹಾಡಹಗಲೇ ಫ್ಯಾನ್ಸಿ ಸ್ಟೋರ್ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು
ಒಬ್ಬರಿಗೆ ತೀವ್ರ ಜಾಂಡೀಸ್, ಮತ್ತೊಬ್ಬರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದೆ. ಹಲವು ಗಂಟೆಗಳಿಂದ ಕಾಯುತ್ತಿದ್ದರೂ ಚಿಕಿತ್ಸೆ ದೊರೆತಿರಲಿಲ್ಲ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡ ಬೈರತಿ ಬಸವರಾಜ್, ಡಿಎಸ್ ಡಾ.ಜಯಪ್ರಕಾಶ್‌ಗೆ ತರಾಟೆಗೆ ತೆಗೆದುಕೊಂಡರು.
ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳನ್ನು ಏಕೆ ಕಾಯಿಸುತ್ತೀರಿ? ಜಿಲ್ಲಾಸ್ಪತ್ರೆಗೆ ಬರೋರು ಬಡವರು. ಯಾರೂ ಬಂದು ಕಾಯುವಂತಾಗಬಾರದು. ಅವರಿಗೆ ವೈದ್ಯಕೀಯ ಸೇವೆಯಲ್ಲಿ ಲೋಪ ಆಗಬಾರದು. ತುರ್ತು ಆದ್ಯತೆ ಇರುವವರಿಗೆ ಮೊದಲು ಚಿಕಿತ್ಸೆ ಸಿಗಬೇಕು. ಇಂಥ ಪ್ರಕರಣ ಮರುಕಳುಸಿದ್ರೆ ಸಸ್ಪೆಂಡ್ ಮಾಡ್ತೇನೆ ಎಂದು ಎಚ್ಚರಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಔಷಧ, ಆಕ್ಸಿಜನ್, ಹಾಸಿಗೆ ಯಾವುದಕ್ಕೂ ಕೊರತೆ ಇಲ್ಲ ಎಂದರು.