ಜಿಲ್ಲೆ

ಜಡೆಯಲ್ಲಿ ಸೊರಬ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸೊರಬ: ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಫೆ.10ರಂದು ಸೊರಬ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ಸರ್ವಾಧ್ಯಕ್ಷರಾಗಿ ಖ್ಯಾತ ವೈದ್ಯ ಹಾಗೂ ಆರೋಗ್ಯ ಸಂಪತ್ತು ಪತ್ರಿಕೆ ಸಂಪಾದಕ ಡಾ. ಎಂ.ಕೆ.ಭಟ್ ಆ್ಕಯೆಾಗಿದ್ದಾರೆ.

ಬೆಳಗ್ಗೆ 8.30ಕ್ಕೆ ತಾಯಿ ಭುವನೇಶ್ವರಿ ದೇವಿ ಮೆರವಣಿಗೆಗೆ ಜಿಪಂ ಸದಸ್ಯ ಶಿವಲಿಂಗೇಗೌಡ ಚಾಲನೆ ನೀಡುವರು. 10 ಗಂಟೆಗೆ ಸಮ್ಮೇಳನವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಲಿದ್ದು ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಆಶಯ ನುಡಿಗಳನ್ನಾಡá-ವರು. ಡಾ. ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮಧ್ಯಾಹ್ನ 2 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದ್ದು ಶ್ರೀ ಸಿದ್ಧವೃಷಬೇಂದ್ರ ಸಂಸ್ಥಾನ ಮಠ ನಡೆದುಬಂದ ದಾರಿ ಮತ್ತು ಜಡೆ ಸುತ್ತಮುತ್ತಲಿನ ಪರಿಸರದ ಬಗ್ಗೆ ನಿವೃತ್ತ ಪ್ರಾಚಾರ್ಯ ಜಯಶೀಲಪ್ಪ ಗೌಡ, ಸಮ್ಮೆಳನ ಸರ್ವಾಧ್ಯಕ್ಷ ಬದುಕು-ಬರಹದ ಬಗ್ಗೆ ಉಪನ್ಯಾಸಕ ಉಮೇಶ್ ಬಿಚ್ಚುಗತ್ತಿ ವಿಷಯ ಮಂಡಿಸುವರು. ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ, 3.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ತಾಲೂಕು ಕಸಾಪ ಹಂಗಾಮಿ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಂದರ್​ರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.