Oplus_16908288 
ಜಿಲ್ಲೆ

ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಿ

ಎಂ.ಎಸ್​.ಹಿರೇಮಠ ಬೆಳಗಾವಿ

ಹಿರೇಬಾಗೇವಾಡಿ: ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಿ ವತ್ತಿಗೆ ಗೌರವ ತರುವ ಕೆಲಸ ಮಾಡಬೇಕಿದೆ ಎಂದು ಬೆಳಗಾವಿ ಪ್ರಭಾ ಹಾಸ್ಪಿಟಲ್​ ವೈದ್ಯ ಡಾ. ವಿಜಯ ದೇಸಾಯಿ ಹೇಳಿದರು.

ಪಟ್ಟಣದ ಸಾಯಿ ಮಂದಿರಲ್ಲಿ ಶ್ರೀಸಾಯಿ ಸೇವಾ ಸಮಿತಿ ಹಾಗೂ ಸೇವಾ ನಿರತ ವೆದ್ಯರ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯರನ್ನು ದೇವರ ಸಮನಾಗಿ ಕಾಣುವುದರಿಂದ ಆ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.ಸಾಯಿ ಸೇವಾ ಸಮಿತಿ ಅಧ್ಯ ಡಾ. ಎ್​.ಎಸ್​. ಪಾಟೀಲ ಮಾತನಾಡಿ, ವೈದ್ಯ ವೃತ್ತಿಗೆ ಸಮಾಜದಲ್ಲಿ ಅತ್ಯಂತ ಗೌರವವಿದ್ದು, ಎಲ್ಲರ ವಿಶ್ವಾಸ ಗಳಿಸಬೇಕಿದೆ ಎಂದರು.ಡಾ. ವಿಜಯ ದೇಸಾಯಿ ಅವರಿಗೆ ಸಾಯಿ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ ಅಧ್ಯತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಸಿ.ಸಿ. ಪಾಟೀಲ, ವೈದ್ಯರಾದ ಎಸ್​.ಎಸ್​. ಪಾಟೀಲ, ವಿರೂಪಾ ಓಂಕಾರಿ, ಸುರೇಶ ಯಳ್ಳೂರ, ಕೆ.ಎಸ್​. ಗವಿಮಠ, ವಿಶ್ವನಾಥ ಯಳ್ಳೂರ, ನಿವೃತ್ತ ಶಿಕರಾದ ವಾರವಾಡಿ, ಎಸ್​.ಎಸ್​. ಅರಳಿಕಟ್ಟಿ ಇತರರು ಇದ್ದರು.