ವಿಜಯವಾಣಿ ಸುದ್ದಿಜಾಲ ಗದಗ
ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿ ಆಗಿದೆ. ರೋಗಿಗಳಿಗೆ ವೈದ್ಯಕಿಯ ಸೇವೆ ಒದಗಿಸುವ ಮೂಲಕ ವೈದ್ಯರು ಸಂತೃಪ್ತಿ ಕಾಣಬಹುದು ಎಂದು ಹಿರಿಯ ವೈದ್ಯ ಡಾ. ಜಗದೀಶ ಶಿರೋಳ ಹೇಳಿದರು.
ನಗರದ ರೋಟರಿ ಐಕೇರ್ ಸೆಂಟರ್ದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ. ಸಿ. ರಾಯ್ ಅವರು ವೈದ್ಯಕಿಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯ ಹಾಗೂ ಅವರ ಜನ್ಮದಿನಾಚರಣೆಯ ಸ್ಮರಣೆಯಲ್ಲಿ ಪ್ರತಿ ವರ್ಷ ಜು. 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದೆ. ಡಾ. ರಾವ್ ಜನಿಸಿದ್ದು ಮತ್ತು ನಿಧನರಾದದ್ದು ಜು. 1 ರಂದು ಎಂಬುದು ವಿಶೇಷ. ವೈದ್ಯಕಿಯ ೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿ ಆಗಿದೆ. ಜನರು ಆರೋಗ್ಯ ಕಾಯ್ದುಕೊಳ್ಳಲು ವೈದ್ಯರು ಬದ್ಧತೆಯಿಂದ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ ಎಂದರು.
ಗದಗ&ಬೆಟಗೇರಿ ರೋಟರಿ ಕ್ಲಬ್ ಉತ್ತಮ ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ಬರಲಿರುವ ದಿನಗಳಲ್ಲಿ ಕ್ಲಬ್ನ ನೂತನ ಪದಾಧಿಕಾರಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಯೋಜನೆಗಳನ್ನು ಜಾರಿಮಾಡಬೇಕು ಎಂದು ಸಲಹೆ ನೀಡಿದ ಅವರು, ರಕ್ತದಾನ, ನೇತ್ರದಾನದ ಬಗ್ಗೆ ಸಂಸ್ಥೆಯು ಜಾಗೃತಿ ಮಾಡುತ್ತಿರುವುದು ಶ್ಲಾನೀಯ ಎಂದರು. ಕಾರ್ಯಕ್ರಮದಲ್ಲಿ ವೈದ್ಯ ಡಾ. ಜಗದೀಶ ಶಿರೋಳ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯ ಡಾ.ಆರ್.ಬಿ.ಉಪ್ಪಿನ ಮಾತನಾಡಿದರು. ಶಿವಾಚಾರ್ಯ ಹೊಸಳ್ಳಿಮಠ, ಶ್ರೀಧಸುಲ್ತಾನಪೂರ, ಸಂತೋಷ ಅಕ್ಕಿ, ನಾಗರತ್ನ ಮಾರನಬಸರಿ, ಸಿ. ವಿ. ಬಡಿಗೇರ ಇದ್ದರು.