ಬೆಂಗಳೂರು: ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ 2025-26ನೇ ಸಾಲಿಗೆ ಡಬಲ್ ಪಂಚರ್ ಲ್ಯಾಪ್ರೋಸ್ಕೋಪಿ ಮತ್ತು ಸಿಒ2 ಇನ್ಸ್ಲೇಟರ್‌ಗಳನ್ನು ಖರೀದಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ 325 ಲಕ್ಷ ರೂ.ಗಳಲ್ಲಿ 25 ಡಬಲ್ ಪಂಚರ್ ಲ್ಯಾಪ್ರೋಸ್ಕೋಪಿ ಮತ್ತು ಸಿಒ2 ಇನ್ಸ್ಲೇಟರ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ.
ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಮತ್ತು ಸಂಪನ್ಮೂಲ ಕೇಂದ್ರ (ಎನಎಸ್‌ಎಚ್‌ಆರ್‌ಸಿ) ಮಾರ್ಗಸೂಚಿಗಳ ಪ್ರಕಾರ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಸಚಿಕಿತ್ಸಾ ವಿಧಾನಗಳನ್ನು ಅಗತ್ಯವೆಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಡಬಲ್ ಪಂಚರ್ ಲ್ಯಾಪ್ರೋಸ್ಕೋಪಿ ಖರೀದಿಸಲು ಆದೇಶದಲ್ಲಿ ಸೂಚಿಸಿದೆ.