ಜಿಲ್ಲೆ

ಅವಶ್ಯವಿದ್ದವರಿಗೆ ಕೈಲಾದ ಸಹಾಯ ಮಾಡಿ

ಬೈಲಹೊಂಗಲ: ತಾಲೂಕಿನ ಬೇವಿನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಭಕ್ತರು ಮತ್ತು ಪಟ್ಟಣದ ಸ್ವರಾಜ್​ ಆರ್​.ಒ. ಇಂಡಸ್ಟ್ರೀಜ್​ ವತಿಯಿಂದ ನೀಡಿದ ಶುದ್ಧ ಕುಡಿಯುವ ನೀರಿನ ಟಕ ಉದ್ಘಾಟನೆ ಸಮಾರಂಭ ಶನಿವಾರ ನಡೆಯಿತು.

ಶ್ರೀ ಸತ್ಯಸಾಯಿ ಭಕ್ತ ವೆಂಕಟೇಶಕುಮಾರ ಮೇದಾ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ, ಎಲ್ಲರನ್ನೂ ಪ್ರೀತಿಸಿ, ಅವಶ್ಯ ಇರುವರಿಗೆ ಕೈಲಾದಷ್ಟು ಸಹಾಯ ಮಾಡಿದರೆ ಭಗವಂತನ ಸೇವೆ ಮಾಡಿದಂತಾಗುತ್ತದೆ ಎಂದರು.  ಸ್ವರಾಜ್​ ಇಂಡಸ್ಟ್ರೀಜ್​ ಮಾಲೀಕ ಬಾಳನಗೌಡ ಪಾಟೀಲ ಮಾತನಾಡಿ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರಿನ ಟಕ ಕೊಡಲಾಗಿದೆ ಎಂದರು.

ವಿಜಯಕುಮಾರ ಬಡ್ಡಿ ಮಾತನಾಡಿ, ಸತ್ಯಸಾಯಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಆರೋಗ್ಯ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಎಸ್​ಡಿಎಂಸಿ ಅಧ್ಯ ಕೆಂಚಪ್ಪ ಕಡಬಿ, ಸದಸ್ಯರು ಇತರರಿದ್ದರು. ಬಿ.ಸಿ.ಮುದಕನಗೌಡರ ನಿರೂಪಿಸಿದರು.