ಜಿಲ್ಲೆ

ನೆನಪಿನಲ್ಲಿ ಉಳಿಯುವ ಕಾರ್ಯ ಮಾಡಿ

ವಿನಯ ಹೆಗಡೆ

ನವಲಗುಂದ: ನಾವು ಮಾಡುವ ಕೆಲಸ, ಕಾರ್ಯಗಳು ಶಾಶ್ವತವಾಗಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತಾದರೆ ಅವರ ನೆನಪು ಅಮರವಾಗಿರುತ್ತದೆ ಎಂದು ಗವಿಮಠ ಬಸವಲಿಂಗ ಸ್ವಾಮೀಜಿ ನುಡಿದರು.

ಪಟ್ಟಣದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಧಾರವಾಡದ ಕೆಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಹಕಾರ ನೀಡಿದ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಪ್ರಾ.ಕೃ.ಪ.ಸ.ಸಂಘದ ಮತದಾರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಆರ್.ಬಿ. ಶಿರಿಯನ್ನವರ ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, 30 ವರ್ಷದಿಂದ ಬದಲಾವಣೆಯಾಗದ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದಂತಾಗಿದೆ. ಈ ದಿಸೆಯಲ್ಲಿ ಸಂಕದ ಅವರು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸದೆ ಎಲ್ಲ ಸಮುದಾಯದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಲಹೆ ನೀಡಿದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ನಾಗಪ್ಪ ಸಂಕದ ಮಾತನಾಡಿ, ಕೆಸಿಸಿ ಬ್ಯಾಂಕಿನಿಂದ ದೊರೆಯುವ ಸೌಲಭ್ಯವನ್ನು ಕಟ್ಟಕಡೆಯ ರೈತನಿಗೂ ಮುಟ್ಟುವಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆಂದು ಭರವಸೆ ನೀಡಿದರು.

ಗಂಗಪ್ಪ ಮನಮಿ, ಭಾರತಿ ಮಡಿವಾಳಪ್ಪ ಸಂಕದ, ಶಂಕರ ಮುಗದ, ಷಣ್ಮುಖ ಗುರಿಕಾರ, ಎಸ್.ಬಿ. ದಾನಪ್ಪಗೌಡ್ರ, ಎ.ಬಿ. ಹಿರೇಮಠ, ಸಿದ್ದನಗೌಡ ಪಾಟೀಲ, ಚಂದ್ರಶೇಖರ ಹುಣಸಿಕಟ್ಟಿ, ನಿಂಗಪ್ಪ ಬಾರಕೇರ, ಮುತ್ತಣ್ಣ ಮನಮಿ, ಎಸ್.ವಿ. ಮುದಿಗೌಡ್ರ, ದ್ಯಾಮನಗೌಡ ಪಾಟೀಲ, ಬಸವರಾಜ ಗಾಣಿಗೇರ, ಸಿದ್ದಣ್ಣ ಕಿಟಗೇರಿ, ಅಶೋಕ ಮಜ್ಜಿಗುಡ್ಡ, ಇತರರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಕರಗೌಡ ರಾಯನಗೌಡರ ನಿರೂಪಿಸಿದರು, ಶಾಂತವೀರಗೌಡ ಪಾಟೀಲ ವಂದಿಸಿದರು.