ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕಿ ಸವಿತಾ ಮಾಧವ್ ಅವರನ್ನು ಸನ್ಮಾನಿಸಲಾಯಿತು. ಜಿ.ವಿಜಯ್‌ಕುಮಾರ್, ಕಿಶೋರ್‌ಕುಮಾರ್, ವಸಂತ್ ಹೋಬಳಿದಾರ್, ಶ್ರೀಕಾಂತ್, ಮಂಜುನಾಥ ಕದಂ, ವೀಣಾ ಕಿಶೋರ್ ಇತರರಿದ್ದರು. 
ಜಿಲ್ಲೆ

ತಂತ್ರಜ್ಞಾನ ಬಳಸಿಕೊಂಡು ಸೇವಾಕಾರ್ಯ ಮಾಡಿ

Shivamogga - Desk - Megha MS

ಶಿವಮೊಗ್ಗ: ಆಧುನಿಕ ತಂತ್ರಜ್ಞಾನದ ಸದ್ಬಳಕೆ ಜತೆಗೆ ರೋಟರಿ ಸೇವಾ ಕಾರ್ಯಗಳು ಜನರಿಗೆ ಹೆಚ್ಚು ತಲುಪುವಂತಾಗಬೇಕು. ಹೆಚ್ಚು ಜನರಿಗೆ ಸೇವೆಗಳು ತಲುಪಿದಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕಿ ಸವಿತಾ ಮಾಧವ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸಭಾಂಗಣದಲ್ಲಿ ಮೈಕ್ರೋ ಸಾಫ್ಟ್‌ವೇರ್ ಕಂಪನಿ ಸಿಇಒ ಸತ್ಯ ನಾದೆಲ್ಲ ಅವರ ಹಿಟ್ ರಿಫ್ರೆಷ್ ಪುಸ್ತಕದ ಕುರಿತು ಮಾತನಾಡಿದ ಅವರು, ಜೀವನದ ಕಹಿ ದಿನಗಳಲ್ಲೂ ಒಬ್ಬ ವ್ಯಕ್ತಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದರು.
ರೋಟರಿ ಸದಸ್ಯರು ಆಧುನಿಕ ತಂತ್ರಜ್ಞಾನದ ಸವಲತ್ತು ಬಳಸಿಕೊಂಡು ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ರೋಟರಿ ಇನ್ನೂ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದೆ. ಜತೆಗೆ ನೂರಾರು ಶಾಲೆಗಳಿಗೆ ಪರಿಕರ ನೀಡುತ್ತ ಬಂದಿದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕಿಶೋರ್‌ಕುಮಾರ್, ವಸಂತ್ ಹೋಬಳಿದಾರ್, ಶ್ರೀಕಾಂತ್, ಮಂಜುನಾಥ ಕದಂ, ವೀಣಾ ಕಿಶೋರ್, ಬಿಂದು ವಿಜಯಕುಮಾರ್, ಚಂದ್ರಶೇಖರಯ್ಯ, ಪ್ರೊ. ಧನಂಜಯ್, ಡಾ. ಅರುಣ್, ಡಾ. ಪರಮೇಶ್ವರ್ ಶಿಗ್ಗಾಂವ್, ಆದಿಮೂರ್ತಿ ಉಪಸ್ಥಿತರಿದ್ದರು.