ಕನ್ನಾಳ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ತುರ್ವಿಹಾಳ ಗುರುವಾರ ಚಾಲನೆ ನೀಡಿದರು. ಕನ್ನಾಳ ಗ್ರಾಪಂ ಅಧ್ಯಕ್ಷೆ ಸರಸ್ವತಿ ವೀರೇಶ ಪಾಟೀಲ್, ತಾಪಂ ಕೆಡಿಪಿ ಸದಸ್ಯ ದೇವಪ್ಪ ರಾಠೋಡ, ಸದಾಶಿವಯ್ಯ ಸ್ವಾಮಿ ಇತರರಿದ್ದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿ ಮಾಡಿಕೊಳ್ಳಿ

ನರೇಶ್ ಕುಮಾರ್

ಮುದಗಲ್: ಸರ್ಕಾರದ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಗ್ರಾಮಸ್ಥರು ಸಹಕರಿಸಬೇಕು ಹಾಗೂ ಗುಣಮಟ್ಟದ ಕಾಮಗಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಸಮೀಪದ ಕನ್ನಾಳ ಗ್ರಾಮದಲ್ಲಿ ಕೆಕೆಆರ್‌ಡಿಬಿ 38 ಲಕ್ಷ ರೂ.ಅನುದಾನದಲ್ಲಿ ಕೈಗೊಂಡಿರುವ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರೂ ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಮಧ್ಯೆಯೂ ಬೇರೆಬೇರೆ ರೀತಿಯಲ್ಲಿ ಅನುದಾನ ತಂದು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯರಾದ ವೀರಭಧ್ರಗೌಡ, ಸಂಗಮೇಶ ಕನ್ನಾಳ, ಹನುಮಂತಪ್ಪ, ಗಂಗಪ್ಪ, ಶಂಕ್ರಪ್ಪ ಸೊಸೈಟಿ, ಬಸವರಾಜ, ಪಿಡಿಒ ಜೆ.ಮಲ್ಲಿಕಾರ್ಜುನ ಇತರರಿದ್ದರು.