ಜಿಲ್ಲೆ

ನಕಲಿ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನಗಳನ್ನು ಮಾರದಿರಿ

ಗುಂಡ್ಲುಪೇಟೆ: ತಾಲೂಕಿನಲ್ಲಿ ಈಗಾಗಲೇ ಹುರುಳಿ ಹಾಗೂ ಅರಿಶಿನ ಸುಗ್ಗಿಯ ಕಾಲ ಪ್ರಾರಂಭವಾಗಿದ್ದು ಇವುಗಳನ್ನು ಖರೀದಿಸಲು ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ರೈತರ ಮನೆಗಳಿಗೆ ಬಂದು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡುವುದಾಗಿ ನಂಬಿಸಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ಇವರು ತೂಕದಲ್ಲಿ ಮೋಸ ಮಾಡುವುದು ಹಾಗೂ ಖರೀದಿ ಮಾಡಿದ ಕೃಷಿ ಉತ್ಪನ್ನಕ್ಕೆ ಸರಿಯಾಗಿ ಹಣ ಪಾವತಿ ಮಾಡದೆ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಆದ್ದರಿಂದ ರೈತರು ತಮ್ಮ ಕೃಷಿ ಹುಟ್ಟುವಳಿಗಳಾದ ಹುರುಳಿ, ಅರಿಶಿನ ಹಾಗೂ ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ, ತಾಲೂಕಿನ ತೆರಕಣಾಂಬಿಯ ಪ್ರಾಂಗಣಕ್ಕೆ ತಂದು ಮಾರಾಟ ಮಾಡಬಹುದು.

ಅಕಸ್ಮಾತ್ ವ್ಯಾಪಾರಸ್ಥರು ತಮ್ಮ ಹಳ್ಳಿಗಳಿಗೆ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸಲು ಮುಂದಾದಲ್ಲಿ ಅವರ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಅಧಿಕೃತವಾಗಿ ಲೈಸೆನ್ಸ್ ಪಡೆದಿರುವ ಬಗ್ಗೆ ಖಾತರಿಪಡಿಸಿಕೊಂಡು ವ್ಯವಹರಿಸಬೇಕು. ಅನಧಿಕೃತ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಲ್ಲಿ ಮಾಹಿತಿಯನ್ನು ಕಚೇರಿ ಮೊ.ನಂ. 9844211885, 90086268612 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಪ್ರಕಟಣೆಯಲ್ಲಿ ಕೋರಿದ್ದಾರೆ.