ಬಾಗಲಕೋಟೆ: ನಗರದ ಹಾಲಮ್ಮ ಕೆರೂಡಿ ಕ್ಯಾನ್ಸರ ಮತ್ತು ಹೃದಯರೋಗ ಆಸ್ಪತ್ರೆಯ 8 ನೇ ವಾರ್ಷಿಕೋತ್ಸವದ ನಿಮಿತ್ಯ ನಡೆದ ಉಚಿತ ಕ್ಯಾನ್ಸರ್ ಮತ್ತು ಹೃದಯರೋಗ ಚಿಕಿತ್ಸೆ ಮತ್ತು ಉಚಿತ ರಕ್ತದಾನ ಶಿಬಿರದಲ್ಲಿ 162 ಕ್ಕೂ ಹೆಚ್ಚು ಜನರು ಸದುಪಯೋಗ ಪಡೆದುಕೊಂಡರು.
ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಸಂಸ್ಥೆಯ ಚರ್ಮೇನ್ ಡಾ.ಬಿ.ಎಚ್.ಕೆರೂಡಿ ಮಾತನಾಡಿ, ಆಸ್ಪತ್ರೆಯು ಕಳೆದ 8 ವರ್ಷಗಳಲ್ಲಿ ಸರ್ಕಾರಿ ಮತ್ತು ವಿವಿಧ ಖಾಸಗಿ ವಿಮಾ ಯೋಜನೆಗಳಡಿಯಲ್ಲಿ ಈವರೆಗೆ ಕ್ಯಾನ್ಸರ್ ಮತ್ತು ಹದಯ ರೋಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಕ್ಯಾನ್ಸರ್ ವಿಭಾಗದಲ್ಲಿ 9600 ರೋಗಿಗಳಿಗೆ ಕಿಮೋಥೇರಪಿ ಚಿಕಿತ್ಸೆ, 7200 ರೋಗಿಗಳಿಗೆ ರೆಡಿಯೋಥೇರಪಿ ಚಿಕಿತ್ಸೆ ಹಾಗೂ ಅಂದಾಜು 3000 ರೋಗಿಗಳಿಗೆ ಕ್ಲಿಷಕರವಾದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹೃದಯರೋಗ ವಿಭಾಗದಲ್ಲಿ 6695 ರೋಗಿಗಳಿಗೆ ಎಂಜೀಯೋಗ್ರಾಮ 3692 ರೋಗಿಗಳಿಗೆ ಎಂಜೀಯೋಪ್ಲಾಸ್ಟಿ ಹಾಗೂ ಅಂದಾಜು 1500 ರೋಗಿಗಳಿಗೆ ತೆರದ ಹೃದಯ ಚಿಕಿತ್ಸೆ ಮತ್ತು ವಾಲ್ವ ರಿಪ್ಲೆಸ್‌ಮೆಂಟ್ ಚಿಕಿತ್ಸೆಯನ್ನು ನೀಡಲಾಗಿದೆ. ಆರೋಗ್ಯ ಬಗ್ಗೆ ಎಲ್ಲರು ಜಾಗೃತರಾಗಿ ಇರಬೇಕು. ನಿರ್ಲಕ್ಷೃ ವಹಿಸಬಾರದು ಎಂದು ತಿಳಿಸಿದರು.
ಭಾನುವಾರ ನಡೆದ ಉಚಿತ ಶಿಬಿರದಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ 37 ರೋಗಿಗಳನ್ನು ಮತ್ತು ಹೃದಯರೋಗಕ್ಕೆ ಸಂಬಂಧಿಸಿಂತೆ 125 ರೋಗಿಗಳನ್ನು ಒಟ್ಟು 162 ಉಚಿತವಾಗಿ ತಪಾಸಣೆ ಮಾಡಲಾಯಿತು ಮತ್ತು 20 ರೋಗಿಗಳಿಗೆ ಕ್ಷ-ಕಿರಣ, 40 ಜನರಿಗೆ ರಕ್ತ ತಪಾಸಣೆ, 35 ಜನರು ಉಚಿತವಾಗಿ ರಕ್ತದಾನವನ್ನು ಮಾಡಿದರು. ಅಂದಾಜು 15 ಜನರಿಗೆ ಎಂಜಿಯೋಗ್ರಾಫಿ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸಲಹೆಯನ್ನು ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಅನುಸೂಯಾ ಬಿ ಕೆರೂಡಿ, ಡಾ. ಸೋಮಶೇಖರ ಬಿ ಕೆರೂಡಿ, ಡಾ. ನಾರಾಯಣ ಎಂ, ಡಾ. ಸುನೀತಾ ಎಸ್. ಕೆರೂಡಿ, ಡಾ. ಚಂದ್ರಶೇಖರ ಬಿ ಕೆರೂಡಿ ಮತ್ತು ಡಾ. ಕ್ಷಮತಾ ಸಿ ಕೆರೂಡಿ ಹಾಗೂ ಸಂಸ್ಥೆಯ ಹೃದಯರೋಗ ತಜ್ಞ ವೈದ್ಯರಾದ ಡಾ. ಸಂತೋಷ ಹುಕ್ಕೇರಿ, ಡಾ. ಸಂತೋಷ ಚಿಕ್ಕೋಡಿ, ಕ್ಯಾನ್ಸರ್ ತಜ್ಞ ವೈದ್ಯರಾದ ಡಾ. ಸುರೇಶ ಉಳ್ಳಾಗಡ್ಡಿ, ಡಾ. ಈರಪ್ಪ ಮದಭಾವಿ, ಡಾ. ಶರತಕುಮಾರ ಕೆ.ಎಲ್ ಮತ್ತು ಡಾ.ಹಂಸಾ ನಂದಿನಿ ಉಪಸ್ಥಿತರಿದ್ದರು.