ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಬಾರದು ಎಂದು ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಅಖಿಲ ಭಾರತ ಬಂಜಾರ ಸೇವಾ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ನಾರಾಯಣಪ್ಪ ನಾಯಕ, ಪದಾಕಾರಿಗಳಾದ ಗೋವಿಂದರಾಜ, ಜಿವಾಲಪ್ಪ ನಾಯಕ, ಎನ್.ಶಿವಣ್ಣ ಪವಾರ್, ತಮ್ಮಣ್ಣ ರಾಠೋಡ್, ತುಳಜಾರಾಮ್ ನಾಯಕ, ರಾಜು ಚವ್ಹಾಣ್, ಡಾಕಪ್ಪ, ಇದ್ದರು.  
ಜಿಲ್ಲೆ

ಸದಾಶಿವ ಆಯೋಗದ ವರದಿ ಜಾರಿ ಮಾಡಬೇಡಿ

ರಾಚಯ್ಯ ಸ್ವಾಮಿ

ರಾಯಚೂರು: ಹಲವು ಸಮುದಾಯಗಳ ಸಂವಿಧಾನಿಕ ಮೀಸಲಾತಿ ಹಕ್ಕನ್ನು ಅಭದ್ರಗೊಳಿಸವು ಹುನ್ನಾರ ಅಡಗಿರುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಬಾರದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಸ್ಥಳೀಯ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ವರದಿಯಲ್ಲಿ ಪರಿಶಿಷ್ಟ ಜಾತಿಯ ಕೆಲವು ಸಮುದಾಯಗಳನ್ನು ಒಲೈಸುವ ಮತ್ತು ಕೆಲವು ಸಮುದಾಯಗಳಿಗೆ ಅನ್ಯಾಯ ಮಾಡುವ ಅಂಶಗಳಿವೆ ಎಂದು ದೂರಿದರು.
ವರದಿಯಲ್ಲಿ ಅಸ್ಪಷ್ಟ, ಅವಾಸ್ತವಿಕ ಮತ್ತು ಅಸಂವಿಧಾನಿಕ ಅಂಶಗಳಿದ್ದು, ಂವಿಧಾನದಲ್ಲಿ ಮೀಸಲಾತಿಯಲ್ಲಿ ವರ್ಗೀಕರಣ ಮಾಡಲು ಅವಕಾಶವಿಲ್ಲ. ಆದರೂ ಒಳ ಮೀಸಲಾತಿ ಹೆಸರಿನಲ್ಲಿ ಬಂಜಾರ, ಭೋವಿ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳ ಮೀಸಲು ಕಡಿತಗೊಳಿಸಲು ಶಿಾರಸ್ಸು ಮಾಡಲಾಗಿದೆ.
ಈಗಾಗಲೇ ಮೀಸಲಾತಿ ವರ್ಗೀಕರಣಕ್ಕೆ ಸಂಬಂಸಿದಂತೆ ರಾಜ್ಯ ಸರ್ಕಾರದ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಸರ್ಕಾರ ನ್ಯಾಯಾಲಯಕ್ಕೆ ತನ್ನ ಅಭಿಪ್ರಾಯ ಸಲ್ಲಿಸುವುದು ಬಾಕಿಯಿದೆ. ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ಅಸಂವಿಧಾನಿಕ ತೀರ್ಮಾನಗಳನ್ನು ಸಮುದಾಯ ವಿರೋಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮುದಾಯದ ಹಿತರಕ್ಷಣೆ ಮಾಡುತ್ತದೆ ಎಂದು ಭಾವಿಸಿದ್ದು, ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಬಾರದು. ವರದಿಗೆ ಜಾರಿಗೆ ಒತ್ತಾಯಿಸುವ ಸಚಿವರು, ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾರಾಯಣಪ್ಪ ನಾಯಕ, ಪದಾಕಾರಿಗಳಾದ ಗೋವಿಂದರಾಜ, ಜಿವಾಲಪ್ಪ ನಾಯಕ, ಎನ್.ಶಿವಣ್ಣ ಪವಾರ್, ತಮ್ಮಣ್ಣ ರಾಠೋಡ್, ತುಳಜಾರಾಮ್ ನಾಯಕ, ರಾಜು ಚವ್ಹಾಣ್, ಡಾಕಪ್ಪ, ಮೋನಪ್ಪ ನಾಯಕ, ಚನ್ನಪ್ಪ ಪವಾರ್ ಇದ್ದರು.