ಕಾಲೇಜಿನ ನೂರಾರು ವಿದ್ಯಾರ್ಥಿಗಳಿಂದ ಮತದಾನ ಮಾಡಿ ಎಂಬ ಕನ್ನಡ ಅಕ್ಷರ ಮೂಲಕ ಜಾಗೃತಿ ಸಂದೇಶ ರಚಿಸಿದರು. 
ಜಿಲ್ಲೆ

ಆಸೆ, ಆಮಿಷಗಳಿಗೆ ಬಲಿಯಾಗದಿರಿ

ಎಂ.ರವಿ

ಶ್ರೀರಂಗಪಟ್ಟಣ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಪ್ರತಿಯೊಬ್ಬರೂ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ, ಮತಗಟ್ಟೆಗೆ ಬಂದು ನೈತಿಕ ಮತದಾನ ಮಾಡಿ ಸಂವಿಧಾನ ಹಕ್ಕನ್ನು ಚಲಾಯಿಸಬೇಕು ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಶೇಕ್ ತನ್ವೀರ್ ಆಸ್ಿ ತಿಳಿಸಿದರು.

ತಾಲೂಕಿನ ಬೆಳವಾಡಿ ಗ್ರಾಮದ ಮಹಾರಾಜ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಯುವ ಮತದಾರರ ವಿಶೇಷ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಮುನ್ನಡೆಸುವ ಜನಪ್ರತಿನಿಗಳ ಆಯ್ಕೆಗೆ ನಡೆಯುವ ಚುನಾವಣೆ ದೇಶದ ಹಬ್ಬ. ಮತದಾನವೆಂಬುದು ಎಲ್ಲರ ಪ್ರಮುಖ ಹಕ್ಕಾಗಿದ್ದು, ಇನ್ನೊಬ್ಬರನ್ನು ನೋಡಿ ಪ್ರಚೋದನೆಗೆ ಒಳಗಾಗಿ ಮತ ಹಾಕದೆ, ದೇಶದ ಯುವಜನರು ಹಾಗೂ ನಾಗರಿಕರ ಉತ್ತಮ ಭವಿಷ್ಯ ನಿರ್ಮಾಣ ಹಾಗೂ ಅಭಿವೃದ್ಧಿ ಮಾಡುವಂತಹ ನಿಮಗೆ ಸೂಕ್ತ ಎನಿಸಿದ ವಕ್ತಿಗಳಿಗೆ ಪ್ರಾಮಾಣಿಕ ಹಾಗೂ ಎಚ್ಚರಿಕೆ ವಹಿಸಿ ಮಾಡುವ ಮತದಾನದ ಮೂಲಕ ಲೋಕಸಭಾ ಚುನಾವಣಾ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿ ಎಂದರು.

ಇದೇ ವೇಳೆ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಂದ ಮತದಾನ ಮಾಡಿ ಎಂಬ ಕನ್ನಡ ಅಕ್ಷರ ಮೂಲಕ ಜಾಗೃತಿ ಸಂದೇಶವನ್ನು ರಚಿಸಿದರು. ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಶ್ರೀರಂಗಪಟ್ಟಣ ತಾಪಂ ಇಒ ಅಕಾರಿ ವೇಣು, ಬಿಇಒ ಆರ್.ಪಿ.ಮಹೇಶ್ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಇನ್ನಿತರರು ಉಪಸ್ಥಿತರಿದ್ದರು.