ಸಿಂಧನೂರಿನಲ್ಲಿ ಭಾನುವಾರ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್‌ಗಳಿಗೆ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಉದ್ಘಾಟಿಸಿದರು. ಪೌರಾಯುಕ್ತ ಪಾಂಡುರಂಗ ಇಟಗಿ, ವಿರೋಧ ಪಕ್ಷದ ನಾಯಕ ಚಂದ್ರಶೇಖರ ಮೈಲಾರಿ, ಪರಿಸರ ಇಂಜಿನಿಯರ್ ಪ್ರವೀಣ ಸಾಗರ್, ಆರೋಗ್ಯ ನಿರೀಕ್ಷಕ ಕಿಶನರಾವ್ ಇದ್ದರು. 
ಜಿಲ್ಲೆ

ಯಾವುದೇ ದುಶ್ಚಟಗಳಿಗೆ ಬಲಿಯಾಗದಿರಿ

ನರೇಶ್ ಕುಮಾರ್

ಸಿಂಧನೂರು: ನಗರ ಸ್ವಚ್ಛತೆಗೆ ಕಾರಣರಾದ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಹೇಳಿದರು.

ನಗರದಲ್ಲಿ ಭಾನುವಾರ ನಗರಸಭೆ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್‌ಗಳಿಗೆ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಪೌರಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಆಗಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರ ಆಶೋತ್ತರಗಳಿಗೂ ನಗರಸಭೆ ಸ್ಪಂದಿಸಲಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಕುಟುಂಬವನ್ನು ಕಾಪಾಡಿಕೊಳ್ಳಬೇಕು ಎಂದರು.

ನಗರಸಭೆ ವಿರೋಧ ಪಕ್ಷದ ನಾಯಕ ಚಂದ್ರಶೇಖರ ಮೈಲಾರಿ ಮಾತನಾಡಿ, ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಊರು ಸ್ವಸ್ಥವಾಗಿರುತ್ತದೆ. ಆರೋಗ್ಯ ತಪಾಸಣಾ ಶಿಬಿರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಶಿಬಿರ ಉದ್ಘಾಟಿಸಿದರು. ಪರಿಸರ ಇಂಜಿನಿಯರ್ ಪ್ರವೀಣ ಸಾಗರ್, ಆರೋಗ್ಯ ನಿರೀಕ್ಷಕರಾದ ಕಿಶನರಾವ್, ಗೌಡರ್ ಲಕ್ಷ್ಮೀಪತಿ, ವೆಂಕಟೇಶ ಕುಮಾರ, ಲಿಂಗರಾಜ ಇದ್ದರು.