ಮೆಣಸೆ ಗ್ರಾಪಂನಲ್ಲಿ ಪರಿಸರ ದಿನದ ಅಂಗವಾಗಿ ತಾಪಂ ಇಒ ಎಚ್.ಸುದೀಪ್ ಗಿಡ ನೆಟ್ಟರು. ಸಂಧ್ಯಾ ಮರಿಯಪ್ಪ, ನಾಗಭೂಷಣ್, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಭೂಮಿ ಶೋಷಿಸಬೇಡಿ

ಎಸ್.ಎನ್.ರವೀಂದ್ರ

ಶೃಂಗೇರಿ: ಜಾಗತಿಕ ತಾಪಮಾನ ದಿನವೂ ಏರಿಕೆಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಇದರ ಸಂರಕ್ಷಣೆ ಪ್ರತಿಯೊಬ್ಬರ ಗುರುತರ ಜವಾಬ್ದಾರಿ ಎಂದು ತಾಪಂ ಇಒ ಎಚ್.ಸುದೀಪ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ಮೆಣಸೆ ಗ್ರಾಪಂನಲ್ಲಿ ತಾಪಂ ಆಯೋಜಿಸಿದ್ದ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ನಮಗಿರುವುದು ಒಂದೇ ಭೂಮಿ. ಅದರ ಶೋಷಣೆ ಮಾಡಬಾರದು. ಉತ್ತಮ ಗಾಳಿಗಾಗಿ ಗಿಡಗಳನ್ನು ಬೆಳೆಸಿ ಪೋಷಿಸಬೇಕು ಎಂದರು.
ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಮಾತನಾಡಿ, ಪರಿಸರದ ಸಂರಕ್ಷಣೆಗೆ ನಾವು ಮೊದಲು ಬದ್ಧರಾಗಿರಬೇಕು. ಮಾಲಿನ್ಯ ಕಡಿಮೆಯಾಗಲು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಹೆಚ್ಚು ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರದ ಸೌಂದರ್ಯ ಕಾಪಾಡಬೇಕು ಎಂದು ಹೇಳಿದರು.
ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಮಂಜುನಾಥ್, ತಾಪಂ ಐಇಸಿ ಸಂಯೋಜಕಿ ಸೌಮ್ಯಾ, ಮೆಣಸೆ ಪಿಡಿಒ ನಾಗಭೂಷಣ್ ಇತರರಿದ್ದರು.