ನವಲಗುಂದ: ಶಿಕ್ಷಕ ವೃತ್ತಿ ಅತ್ಯಂತ ಗೌರವಯುತವಾದದ್ದು. ಯಾವುದೇ ಚ್ಯುತಿ ಬರದಂತೆ ನಡೆದುಕೊಂಡಾಗ ಮಾತ್ರ ಶಿಕ್ಷಕ ವೃತ್ತಿಗೆ ಸಾರ್ಥಕತೆ ಬರಲು ಸಾಧ್ಯ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಗಳ ಕಾರ್ಯಾಲಯ ಆಶ್ರಯದಲ್ಲಿ ಪಟ್ಟಣ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಲಿಸುವ ಮೂಲಕ ಉತ್ತಮ ಫಲಿತಾಂಶ ನೀಡಲು ಶ್ರಮವಹಿಸಬೇಕು ಎಂದರು.
ಅಣ್ಣಿಗೇರಿಯ ಸದ್ಗುರು ಸಮರ್ಥ ಡಾ.ಎ.ಸಿ. ವಾಲಿ ಮಹಾರಾಜರು ಆಶೀರ್ವಚನ ನೀಡಿ, ಭಾರತದಲ್ಲಿ ಗುರು ಪರಂಪರೆ ವೇದ ಉಪನಿಷತ್ಗಳ ಕಾಲದಿಂದಲೂ ನಡೆದು ಬಂದಿದೆ. ಗುರುವಿನಿಂದಲೇ ಶಕ್ತಿ, ಗುರುವಿನಿಂದಲೇ ಮುಕ್ತಿ. ಸಮಾಜದ ನಿರೀಕ್ಷಿತ ಆಶಯದಂತೆ ಶಿಕ್ಷಕರು ಬದ್ಧತೆಯ ಸೇವೆ ಮಾಡಿದಾಗ ಸಮಾಜ ಅವರನ್ನು ಗೌರವಿಸುತ್ತದೆ ಎಂದು ವಿವರಿಸಿದರು.
ಶಿಕ್ಷಕ ತನ್ನ ವೃತ್ತಿಯ ಕೈಂಕರ್ಯದಿಂದ ಒಂದಿಷ್ಟು ಸದೃಢತೆಯ ಹೆಜ್ಜೆ ಮುಂದಿಟ್ಟು, ಮಕ್ಕಳಿಗೆ ಬದುಕಿನ ಶಿಕ್ಷಣ ನೀಡಿದಾಗ ಗುರುವಾಗಬಲ್ಲ. ಶಿಕ್ಷಕ ಶಿಷ್ಯನಿಗೆ ಜ್ಞಾನದ ಬುತ್ತಿ ನೀಡುವ ಜೊತೆಗೆ ಭವಿಷ್ಯದ ಬದುಕಿನ ಬೆಳಕಾಗಬೇಕಿದೆ. ಇಂದು ಜಗತ್ತಿನ ವೇಗಕ್ಕೆ ತಕ್ಕಂತೆ ಮಗು ವೇಗವಾಗಿ ಹೆಜ್ಜೆ ಹಾಕುವ ಶಿಕ್ಷಣ ನೀಡಬೇಕಾಗಿದೆ. ಅಂದಾಗ ಮಾತ್ರ ಮಕ್ಕಳು ವಾಸ್ತವಿಕತೆಗೆ ತೆರೆದುಕೊಳ್ಳುತ್ತಾರೆ. ವಿಜ್ಞಾನ ತಂತ್ರಜ್ಞಾನದ ಬೋಧನೆಯ ಜೊತೆ ಜೊತೆಗೆ ಮೌಲ್ಯಯುತ ಶಿಕ್ಷಣದ ಅರಿವು ಅವಶ್ಯಕ. ಇಂತಹ ಕೆಲಸ ಇಲಾಖೆ ಹಾಗೂ ಸರ್ಕಾರದಿಂದ ರೂಪಿತ ಪಠ್ಯಕ್ರಮದ ಮೂಲಕ ಆಗಬೇಕಾಗಿದೆ ಎಂದರು.
ಬಿಇಒ ಎಸ್.ಬಿ. ಮಲ್ಲಾಡ, ಹರೀಶ ಬೊಮ್ಮನಹಳ್ಳಿ, ಆರ್.ಕೆ.ಮುರನಾಳ, ಶಿಕ್ಷಕರಾದ ಎ.ಬಿ. ಕೊಪ್ಪದ, ಎನ್.ವಿ. ಕುರವತ್ತಿಮಠ, ವೈ.ಎಚ್. ಬಣವಿ, ಆರ್.ಎಚ್. ನೇಗಲಿ, ಎಸ್.ಎಫ್. ನೀರಲಗಿ, ಎಲ್.ಬಿ. ಕಮತ, ಎಸ್.ಕೆ. ಕುರಹಟ್ಟಿ, ಪಿ.ಕೆ. ಹಿರೇಗೌಡ್ರ, ವೈ.ಎಸ್.ಬೆಣ್ಣಿ, ಗಣೇಶ ಹೊಳೆಯಣ್ಣವರ, ಎಸ್.ಎಚ್. ಹರಕುಣಿ, ಆರ್.ಎಸ್. ಪಾಟೀಲ, ಸಂತೋಷ ಪಾಟೀಲ, ಎನ್.ವೈ. ಕಳಸಾಪೂರ, ಆರ್. .ಎಸ್. ವಗ್ಗರ, ವಿ.ಎಂ. ಹಿರೇಮಠ. ಎ.ಆರ್. ಅಕ್ಕಿ, ಎಸ್.ಜಿ. ಹಿರೇಮಠ. ಎಲ್.ಎ. ಮಠ, ಎಸ್.ಎಂ. ಬೆಂಚಿಕೇರಿ, ಬಸವರಾಜ ಹೊನ್ನಕುದರಿ, ಎನ್.ಎನ್. ಹಾಲಿಗೇರಿ, ಇತರರಿದ್ದರು.