ನರಗುಂದ: ಸಾಹಿತಿಗಳು, ಸಂಗೀತಗಾರರು ಹಾಗೂ ಅತ್ಯುತ್ತಮ ಸಂಘಟನಾಕಾರಾದ ಸಿ.ಕೆ.ಎಚ್ ಕಡಣಿ ಶಾಸ್ತ್ರಿಗಳು ಸಂಗೀತ, ನೃತ್ಯ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾವಿದರಿಗೆ ಬಹುದೊಡ್ಡ ವೇದಿಕೆ ಕಲ್ಪಿಸಿದ್ದಾರೆ. ಅವರಿಗೆ ಆಲಮೇಲ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಲಭಿಸಿರುವುದು ಅವರ ಸಾಹಿತ್ಯಿ ಸೇವೆಗೆ ಸಂದ ಗೌರವವಾಗಿದೆ ಎಂದು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆಲಮೇಲ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕಡಣಿ ಶಾಸ್ತ್ರಿಗಳನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು. ವಿಭೂತಿ ಮಾಸ ಪತ್ರಿಕೆ ಸಂಪಾದಕ ಅಂದಾನಪ್ಪ ವಿಭೂತಿ, ಬೆಳ್ಳಟ್ಟಿಯ ಫಕೀರೇಶ್ವರ ಶಾಸ್ತ್ರಿಗಳು, ಸಿದ್ದಯ್ಯಶಾಸ್ತ್ರಿಗಳು ಹಿರೇಮಠ, ನಾಗಯ್ಯಶಾಸ್ತ್ರಿಗಳು, ಶಾಂತಯ್ಯ ಹಿರೇಮಠ, ವಿಜಯಾನಂದ ಚರಂತಿಮಠ, ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.