ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ರಶ್ಮಿ ಹಾಲೇಶ್, ನರೇಂದ್ರಕುಮಾರ್, ಕೃಷ್ಣಮೂರ್ತಿ ಇತರರಿದ್ದರು.  
ಜಿಲ್ಲೆ

ಮತ್ತೊಮ್ಮೆ ಕಂದಾಯ ಪರಿಷ್ಕರಣೆ ಮಾಡಿ

Shivamogga - Desk - Megha MS

ರಿಪ್ಪನ್‌ಪೇಟೆ: ಪಟ್ಟಣದ ಗ್ರಾಪಂ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಕೆರೆಹಳ್ಳಿ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಹೊಸನಗರ ತಾಲೂಕಿನ ಎಲ್ಲ ಇಲಾಖಾಽಕಾರಿಗಳು ಕಾರ್ಯಕ್ರಮದಲ್ಲಿದ್ದು ಸಾರ್ವಜನಿಕರಿಂದ ಬಂದAತಹ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ವಿಽಸುತ್ತಿರುವ ನಿವೇಶನ ಮತ್ತು ಮನೆಗಳ ಪರಿಷ್ಕೃತ ಕಂದಾಯ ಅಽಕವಾಗಿದೆ. ಇದರಿಂದ ಕೂಲಿ ಕಾರ್ಮಿಕರು, ರೈತರು, ಬಡಜನರಿಗೆ ಕಷ್ಟವಾಗುತ್ತಿದ್ದು ಕರ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕರ ಪರಿಷ್ಕರಣೆಯನ್ನು ಮತ್ತೊಮ್ಮೆ ಅವಲೋಕಿಸಿ ಹಿಂದಿನ ಕಂದಾಯ ಪದ್ಧತಿಯನ್ನೇ ಮರು ಜಾರಿಗೊಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ಸಾರ್ವಜನಿಕ, ಕೃಷಿ ಜಮೀನು, ರಸ್ತೆ, ಸಮರ್ಪಕ ವಿದ್ಯುತ್ ಪೂರೈಕೆ, ನಿವೇಶನ ಬೇಡಿಕೆ, ಬಗರ್ ಹುಕುಂ ಹಕ್ಕುಪತ್ರ, ಗೃಹಲಕ್ಷಿ÷್ಮ, ಗೃಹಜ್ಯೋತಿ, ಅರಣ್ಯ ಭೂಮಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಬೀಡಾಡಿ ದನಗಳ ಸಮಸ್ಯೆ, ಬ್ಯಾಂಕ್ ಸಾಲ ನೀಡಿಕೆಯಲ್ಲಿ ತಾರತಮ್ಯ ಸೇರಿ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಲಾಯಿತು. ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿದ ಶಾಸಕರು ಸ್ಥಳದಲ್ಲಿದ್ದ ಅಽಕಾರಿಗಳೊಂದಿಗೆ ಚರ್ಚಿಸಿ ನಿಗದಿತ ಕಾಲಮಿತಿಯೊಳಗೆ ಪರಿಹರಿಸುವಂತೆ ಸೂಚಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಗ್ರಾಪಂನಿAದ ವಿಽಸುತ್ತಿರುವ ಕಂದಾಯ ನಿಯಮವು ರಾಜ್ಯ ಸರ್ಕಾರದ ನಿಯಮವಾಗಿದೆ. ಪರಿಷ್ಕರಣೆ ವಿಷಯವನ್ನು ಮುಂಬರುವ ಅಽವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಜನರ ಸಮಸ್ಯೆಗಳನ್ನು ಆಲಿಸಿದ್ದು ಸಂಬAಧಪಟ್ಟ ಇಲಾಖಾಽಕಾರಿಗಳ ಮೂಲಕ ಕೆಲವೊಂದನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಇನ್ನುಳಿದವುಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಸೂಚಿಸಲಾಗಿದೆ. ಅಽಕಾರಿಗಳು ಅನಗತ್ಯವಾಗಿ ಸಾರ್ವಜನಿಕರನ್ನು ಅಲೆಸಬಾರದು. ಹಾಗೇನಾದರೂ ಕಂಡುಬAದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಇಒ ನರೇಂದ್ರಕುಮಾರ್, ಬಿಇಒ ಕೃಷ್ಣಮೂರ್ತಿ, ಮೆಸ್ಕಾಂ ಎಇಇ ಚಂದ್ರಶೇಖರ್, ಪಿಡಬ್ಲ್ಯುಡಿ ಎಇಇ ಮಲ್ಲಿಕಾರ್ಜುನ, ಅರಣ್ಯಾಽಕಾರಿ ಪವನ್‌ಕುಮಾರ್, ಬಾಬುರಾಜೇಂದ್ರ ಪ್ರಸಾದ್, ಆಹಾರ ನಿರೀಕ್ಷಕ ನಾಗರಾಜ್, ಸಮಾಜ ಕಲ್ಯಾಣಾಽಕಾರಿ ಗೀತಾ, ಉಪತಹಸೀಲ್ದಾರ ಹುಚ್ಚುರಾಯಪ್ಪ, ಕಂದಾಯ ನಿರೀಕ್ಷಕ ಸೈಯದ್ ಅ-ೆÇ್ರÃಜ್, ಟಿಎಚ್‌ಒ ಡಾ. ಸುರೇಶ್, ಪಿಎಸ್‌ಐ ಪ್ರವೀಣ್, ಗ್ರಾಪಂ ಅಧಕ್ಷರಾದ ಧನಲಕ್ಷಿ ್ಮÃ, ಉಬೇದುಲ್ಲಾ ಷರೀಫ್, ಉಪಾಧ್ಯಕ್ಷ ಸುಽÃಂದ್ರ ಪೂಜಾರಿ, ಪಿಡಿಒ ಮಧುಸೂದನ ಇತರರಿದ್ದರು.