ಜಿಲ್ಲೆ

ಕಿಸಾನ್ ಸಮ್ಮಾನ್ ಇ ಕೆವೈಸಿಗೆ ಕಾಲಾವಕಾಶ

Davangere - Desk - Ganesh M K

ಹರಿಹರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ಜೂ. 30ರೊಳಗೆ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಸಹಾಯಧನ ಜಮಾ ಆಗುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ನಾರನಗೌಡ ಹೇಳಿದರು.

ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಒಂದು ದಿನದ ಇ-ಕೆವೈಸಿ ಆಂದೋಲನದಲ್ಲಿ ಮಾತನಾಡಿ, ತಾಲೂಕಿನಲ್ಲಿ ಇನ್ನೂ 7900 ರೈತರು ಇ-ಕೆವೈಸಿ ಮಾಡಿಸಿರುವುದಿಲ್ಲ. ಅಂತಹ ರೈತರು ಕೂಡಲೆ ಇ-ಕೆವೈಸಿ ಮಾಡಿಸಬೇಕೆಂದು ಮನವಿ ಮಾಡಿದರು.

ರೈತರು ಆಧಾರ್ ಕಾರ್ಡ್‌ನೊಂದಿಗೆ ಸಮೀಪದ ಗ್ರಾಮ-ಒನ್ ಕೇಂದ್ರ ಅಥವಾ ಸೇವಾ ಸಿಂಧು ಕೇಂದ್ರದಲ್ಲಿ ಅಥವಾ ರೈತರ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದರು.

ಕೃಷಿ ಅಧಿಕಾರಿಕಾರಿಗಳಾದ ವಿಕಾಸ್, ಆನಂದ್ ಇತರರಿದ್ದರು.