ಎನ್.ಆರ್.ಪುರ ಜೇಸಿ ಸಂಸ್ಥೆಯಲ್ಲಿ ಜೇಸಿ ವಲಯ 14ರ ಉಪಾಧ್ಯಕ್ಷ ಕೆ.ಎ.ಸುಜನ್ ಅವರಿಗೆ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಹೂಗುಚ್ಛ ನೀಡಿ ಸ್ವಾಗತಿಸಿದರು. ಕೆ.ಎಂ.ವಿನುತ್, ದರ್ಶನ್, ಪವನಕರ್, ಆದರ್ಶ ಇತರರಿದ್ದರು. 
ಜಿಲ್ಲೆ

ಜನರ ಮನದಲ್ಲಿ ಉಳಿಯುವ ಸೇವೆ ಮಾಡಿ

ಎಸ್.ಎನ್.ರವೀಂದ್ರ

ನ್.ಆರ್.ಪುರ: ಜೇಸಿ ಸಂಸ್ಥೆ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದರೆ ರಾಷ್ಟೀಯ ಅಧ್ಯಕ್ಷರಿಂದ ಅವಾರ್ಡ್ ಪಡೆಯಬಹುದು ಎಂದು ಜೇಸಿ ವಲಯ 14ರ ಉಪಾಧ್ಯಕ್ಷ ಕೆ.ಎ.ಸುಜನ್ ತಿಳಿಸಿದರು.

ಮಂಗಳವಾರ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸದಸ್ಯರಿಗೆ ಘಟಕ ಅಭಿವೃದ್ಧಿ ಹಾಗೂ ನಿರ್ವಹಣೆ ತರಬೇತಿ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಕೇಂದ್ರ ಕಚೇರಿಯಿಂದ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಇತರ ಸೌಲಭ್ಯಗಳಿದ್ದು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಪ್ರಚಾರ ಬಯಸದೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ನೌಕರರನ್ನು ಗುರುತಿಸಿ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಪ್ರಶಸ್ತಿ ಪ್ರದಾನ ಮಾಡಬಹುದು. ರಕ್ತದಾನ ಶಿಬಿರ ನಡೆಸಬಹುದು. ಪ್ರಥಮ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಎಂದು ಸಲಹೆ ನೀಡಿದರು.
ಎನ್.ಆರ್.ಪುರ ಜೇಸಿ ಸಂಸ್ಥೆ ಈ ವರ್ಷ ಉತ್ತಮ ಕಾರ್ಯ ಮಾಡಬಹುದು ಎಂದು ನಂಬಿಕೆ ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಜೇಸಿ ಸಂಸ್ಥೆಗೆ ಉತ್ತಮ ರಾಷ್ಟ್ರೀಯ ತರಬೇತುದಾರರನ್ನು ಕಳಿಸುತ್ತೇನೆ ಎಂದು ಭರವಸೆ ನೀಡಿದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಟಕ್ಷ ಎಂ.ಪಿ.ಮನು ಮಾತನಾಡಿ, ಮುಂದಿನ ದಿನಗಳಲ್ಲಿ ಜೇಸಿ ಸದಸ್ಯರಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜೇಸಿ ಕಾರ್ಯದರ್ಶಿ ಕೆ.ಎಂ.ವಿನುತ್, ಉಪಾಧ್ಯಕ್ಷ ಅಪೂರ್ವ ರಾಘವೇಂದ್ರ, ಸಹ ಕಾರ್ಯದರ್ಶಿಗಳಾದ ದರ್ಶನ್, ಪವನಕರ್, ಸದಸ್ಯರಾದ ರಜಿತ್, ಆದರ್ಶ, ಪ್ರಮಾಂಕ್ ಇದ್ದರು.