ಜಿಲ್ಲೆ

ಡಿಕೆಸು ಈಗ ಜಿಬಿಡಿಎ ನಿರ್ದೇಶಕ

ಗಂಗಾಧರ ಬಿ ವಿ

* ಬಮುಲ್ ಅಧ್ಯಕ್ಷ ಸ್ಥಾನದ ನಂತರ ಒಲಿದ ಹುದ್ದೆ

* ಪಕ್ಷದಲ್ಲಿ ಪರ ವಿರೋಧ ಚರ್ಚೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಮಾಜಿ ಸಂಸದ ಡಿ.ಕೆ. ಸುರೇಶ್ ರಾಜ್ಯ ರಾಜಕಾರಣದ Àವರ್ÀÄಲ್ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸರ್ಕಾರ ಯಾವುದೇ ಇರಲಿ, ಕ್ಷೇತ್ರದ ಕೆಲಸ ಮಾಡಿಸುವ ಶಕ್ತಿ ಹೊಂದಿದ್ದಾರೆ ಎನ್ನುವ ಹೆಗ್ಗಳಿಗೆ ಹೊಂದಿರುವ ಸುರೇಶ್, ಈಗ ಹಂತ ಹಂತವಾಗಿ ಒಂದೊAದೇ ಹುದ್ದೆಗಳನ್ನು ಪಡೆಯುವ ಮೂಲಕ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಕಳೆದ ಲೋಕಸಭೆ ಚುನಾವಣೆ ಸೋಲಿನ ನಂತರ ಕೆಲ ಕಾಲ ರಾಜಕಾರಣದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಸುರೇಶ್, ಕನಕಪುರ ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಇದಾದ ನಂತರ ಒಂದೊAದೇ ಮಹತ್ವದ ಹುದ್ದೆಗಳನ್ನು ದಕ್ಕಿಸಿಕೊಳ್ಳುತ್ತಿದ್ದು, ಬಮುಲ್ ಅಧ್ಯಕ್ಷರಾದ ನಂತರ ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ನೇಮಕಗೊಳ್ಳುವ ಮೂಲಕ ಯೋಜನೆಗೆ ವೇಗ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಡಿಕೆಸುಗಾಗಿ ಜಾಗ ತೆರವು

ಡಿ.ಕೆ.ಸುರೇಶ್ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ನೇಮಿಸಲು ಪ್ರಾಧಿಕಾರದ ನಿರ್ದೇಶಕರಾಗಿದ್ದ ಅಬ್ಬನಕುಪ್ಪೆ ರಮೇಶ್ ಅವರು ಸ್ಥಾನ ತ್ಯಾಗ ಮಾಡಿದ್ದು, ಅವರಿಗೆ ಈಗ ಬಿಎಂಐಸಿಎಪಿನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಡಿ.ಕೆ.ಸುರೇಶ್ ಜತೆಗೆ ವಾಸ್ತು ಶಿಲ್ಪಿ ಆಗಿರುವ ಬೆಂಗಳೂರಿನ ಆನಂದ ತೀರ್ಥ ಅವರನ್ನು ಮತ್ತೊಬ್ಬ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಪರ ವಿರೋಧ ಚರ್ಚೆ

ಇತ್ತೀಚೆಗಷ್ಟೆ ಬಮುಲ್ ಅಧ್ಯಕ್ಷರೂ ಆಗಿರುವ ಡಿ.ಕೆ.ಸುರೇಶ್ ಮತ್ತೊಂದು ಪ್ರಾಧಿಕಾರದ ನಿರ್ದೇಶಕರಾಗಿ ನೇಮಕವಾಗಿರುವ ಬಗ್ಗೆ ಪರ - ವಿರೋಧ ಚರ್ಚೆಗಳು ಆರಂಭಗೊAಡಿವೆ. ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ವೇಗ ನೀಡಲು ಡಿ.ಕೆ. ಸುರೇಶ್ ಅವರ ಮಾರ್ಗದರ್ಶನ ಅಗತ್ಯವಿದೆ. ಅಧಿಕಾರಿಗಳಿಗೆ ಯೋಜನೆ ಬಗ್ಗೆ ನಿರ್ದೇಶನ ನೀಡಲು ಅವರ ಪ್ರಾಧಿಕಾರದಲ್ಲಿ ಇರಲೇಬೇಕಿತ್ತು. ಈ ಹಿನ್ನೆಲೆಯಲ್ಲಿಯೇ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎನ್ನುವುದು ಒಂದು ವಾದವಾದರೆ ಮತ್ತೊಂದೆಡೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಲಭಿಸಬೇಕಿದ್ದ ಅಧಿಕಾರವನ್ನು ಡಿ.ಕೆ. ಸುರೇಶ್ ಪಡೆದುಕೊಳ್ಳುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯೂ ಕೆಲ ಕಾರ್ಯಕರ್ತರು ಮತ್ತು ಮುಖಂಡರಿAದ ಕೇಳಿ ಬಂದಿದೆ.

ಅಧ್ಯಕ್ಷ ಸ್ಥಾನ ಕಬ್ಬಿಣದ ಕಡಲೆ

ಕೆಎಂಎï ಅಧ್ಯಕ್ಷರಾಗಲೇಬೇಕೆನ್ನುವ ಹಂಬಲದೊAದಿಗೆ ಡಿ.ಕೆ.ಸುರೇಶ್ ಬಮುಲ್ ನಿರ್ದೇಶಕರಾಗಿದ್ದಾರೆ. ಕೆಲ ನಿರ್ದೇಶಕರ ಒತ್ತಡಕ್ಕೆ ಮಣಿದು ಅಧ್ಯಕ್ಷರು ಆಗಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಇದು ಸುಲಭವಲ್ಲ ಎನ್ನುವ ವಾತಾವರಣವಿದೆ. ಹಾಲಿ ಅಧ್ಯಕ್ಷ ಭೀಮಾ ನಾಯ್ಕ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎನ್ನುವ ಕನಸು ಕಂಡಿದ್ದರೆ, ಅತ್ತ ಮಾಲೂರು ಶಾಸಕ ನಂಜೇಗೌಡ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಮೂಲಕ ಕೆಎಂಎï ಅಧ್ಯಕ್ಷ ಸ್ಥಾನ ನನ್ನದೇ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೆ, ಇದರ ನಡುವೆ ಡಿ.ಕೆ.ಸುರೇಶ್, ಅಣ್ಣನ ಬಲವನ್ನು ನೆಚ್ಚಿಕೊಂಡಿದ್ದು, ಕೆಎಂಎï ಅಧ್ಯಕ್ಷ ಸ್ಥಾನ ಪಡೆಯುವ ಹವಣಿಕೆಯಲ್ಲಿ ಇದ್ದಾರೆ. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಬಿಡದೆ, ಕಳೆದ ಬಾರಿ ನೀಡಿದ್ದ ಆಶ್ವಾಸನೆಯಂತೆ ನಡೆದುಕೊಂಡರೆ ಅಧ್ಯಕ್ಷ ಸ್ಥಾನ ಮಾಲೂರು ಶಾಸಕ ನಂಜೇಗೌಡರಿಗೆ ಒಲಿಯಲಿದೆ.

ಡಿ.ಕೆ.ಸುರೇಶ್ ಅವರಿಗೆ ಸಂಸದ ಪದವಿ ತಪ್ಪಿದರೂ, ವಿವಿಧ ಅಧಿಕಾರಗಳನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿಕ ಜೀವನದಿಂದ ದೂರಾಗಾದಂತೆ ಎಚ್ಚರಿಕೆವಹಿಸಿದ್ದಾರೆ. ಇದು ಪಕ್ಷದಲ್ಲಿ ಒಂದು ಹಂತದ ಅಸಮಾಧಾನಕ್ಕೂ ಕಾರಣವಾಗಿದ್ದು, ಬಾಯಿ ಬಿಡುವ ಧೈರ್ಯ ಸಾಲದ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಎಲ್ಲದಕ್ಕೂ ಜೈಕಾರ ಹಾಕುತ್ತಿದ್ದಾರೆ.