ಜಿಲ್ಲೆ

ಡಿಕೆಶಿ ಅಬ್ಬರ - ಡಾಕ್ಟರ್​ ಸೈಲೆಂಟ್ ಆಪರೇಷನ್

ಗಂಗಾಧರ ಬಿ ವಿ

ಗಂಗಾಧರ್​ ಬೈರಾಪಟ್ಟಣ

ರಾಮನಗರ: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಚನ್ನಪಟ್ಟಣದ ಮೇಲೆ ಕಣ್ಣು, ಇದಕ್ಕಾಗಿ ಅಬ್ಬರಿಸುತ್ತಿದ್ದಾರೆ. ಅತ್ತ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರೂ ಆಗಿರುವ ಸಂಸದ ಡಾ.ಸಿ.ಎನ್​.ಮಂಜುನಾಥ್​ ಅವರಿಗೆ ಕನಕಪುರದ ಮೇಲೆ ಆಸಕ್ತಿ ಇದಕ್ಕಾಗಿ ಸದ್ದಿಲ್ಲದೆ ಆಪರೇಷನ್​ ಆರಂಭಿಸಿದ್ದಾರೆ.

ಹೌದು, ಜಿಲ್ಲೆಯಲ್ಲಿ ರಾಜಕೀಯ ಬಿರುಸುಗೊಂಡಿದೆ. ಒಂದೆಡೆ ಕೇಂದ್ರದ ಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನಡುವಿನ ಸಂರ್ಷ ವಯುಕ್ತಿಕ ಮಟ್ಟಕ್ಕೆ ಇಳಿದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಇಬ್ಬರೂ ನಾಯಕರೂ ತಮ್ಮ ಹುದ್ದೆಗಳ ನತೆಯನ್ನು ಮರೆತು ಏಕ ವಚನದಲ್ಲಿಯೇ ವಾಕ್ಸಮರಕ್ಕೆ ಇಳಿದಿದ್ದಾರೆ. ಇದೆಲ್ಲರದ ನಡುವೆಯೇ ಹೃದಯ ತಜ್ಞರೂ ಆದ ಸಂಸದ ಡಾ.ಸಿ.ಎನ್​ ಮಂಜುನಾಥ್​ ಕನಕಪುರದಲ್ಲಿ ಆಪರೇಷನ್​ಗೆ ಇಳಿದಿದ್ದಾರೆ.

ಚನ್ನಪಟ್ಣದಲ್ಲಿ ಡಿ.ಕೆ.ಶಿ ಅಬ್ಬರ

ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆ ಬಾಕಿ ಇದೆ. ಲೋಕಸಭೆ ಚುನಾವಣೆ ಮುಗಿಯತ್ತಿದ್ದಂತೆ ಅಖಾಡಕ್ಕೆ ಇಳಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್​ ಬಹುತೇಕ ಕಳೆದ ಎರಡು ತಿಂಗಳಿಂದಲೂ ಕ್ಷೇತ್ರದಲ್ಲಿ ಅಬ್ಬರಿಸುತ್ತಲೇ ಇದ್ದಾರೆ. ಇದಕ್ಕೆ ಕಾರಣವೂ ಇದೆ, ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಡಿ.ಕೆ.ಶಿವಕುಮಾರ್​ ಅವರ ರಾಜಕೀಯ ಮಹಾತ್ವಾಕಾಂೆಗೆ ಅಗತ್ಯವಾಗಿದ್ದರೂ, ತಮ್ಮ ಮತ್ತು ಎಚ್​.ಡಿ ಕುಮಾರಸ್ವಾಮಿ ಅವರ ನಡುವಿನ ಸಂರ್ಷದಲ್ಲಿ ವಿಜಯಪತಾಕೆ ಹಾರಿಸಬೇಕಾದರೆ ಖಂಡಿತವಾಗಿ ಬೊಂಬೆನಾಡು ಕೈ ವಶ ಆಗಲೇಬೇಕು. ಇದರಿಂದಾಗಿ ಇರುವ ಎಲ್ಲಾ ಅವಕಾಶಗಳನ್ನು ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್​ ಕ್ಷೇತ್ರದಲ್ಲಿ ಮತದಾರರು ಮನ ಗೆಲ್ಲಲ್ಲು ಹೊರಟಿದ್ದಾರೆ.

ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್​ ಅವರ ಅಬ್ಬರ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರಿಗೂ ಸಹ ಆತಂಕವನ್ನು ತಂದಿದ್ದು, ಕ್ಷೇತ್ರದಲ್ಲಿ ಮುಂದೆನಾಗುವುದೋ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲ ಡಿ.ಕೆ.ಶಿವಕುಮಾರ್​ ಅವರು ಎಣಿಸಿದಂತೆ ಕೈ ಗೆಲುವು ಸಾಧಿಸಿದರೆ ಸದ್ಯದ ಮಟ್ಟಿಗೆ ಎಚ್​.ಡಿ.ಕುಮಾರಸ್ವಾಮಿ ಅವರ ಕುಟುಂಬವನ್ನು ಜಿಲ್ಲೆಯಿಂದ ಹೊರ ಹಾಕಿದಂತೆ ಎನ್ನುವ ಲೆಕ್ಕಾಚಾರವೂ ಇದೆ.

ಸೈಲೆಂಟ್​ ಆಪರೇಷನ್​

ಡಾ.ಸಿ.ಎನ್ ಮಂಜುನಾಥ್

ಒಂದೆಡೆ ಡಿ.ಕೆ.ಶಿವಕುಮಾರ್​ ಚನ್ನಪಟ್ಟಣದ ಮಾಡುತ್ತಿರುವ ಅಬ್ಬರ ದೆಹಲಿವರೆಗೂ ಮುಟ್ಟಿದ್ದರೂ ಹೃದಯ ತಜ್ಞ ಡಾ.ಸಿ ಎನ್​ ಮಂಜುನಾಥ್​ ಕನಕಪುರದಲ್ಲಿ ಮಾಡುತ್ತಿರುವ ಸೈಲೆಂಟ್​ ಆಪರೇಷನ್​ ಕನಕಪುರದ ಕಾಂಗ್ರೆಸ್​ ಪಡೆಯನ್ನು ಚಿಂತೆಗೀಡು ಮಾಡಿರುವುದಂತೂ ಸತ್ಯ.

ಕನಕಪುರ ತಾಲೂಕಿಗೆ ಬೇಟಿ ನೀಡುವ ಎಲ್ಲಾ ಅವಕಾಶಗಳನ್ನು ಸಹ ಬಳಕೆ ಮಾಡಿಕೊಳ್ಳುತ್ತಿರುವ ಡಾಕ್ಟರ್​ ಸದ್ದಿಲ್ಲದೆ ಡಿಕೆ ಸಹೋದರರಿಗೆ ಟಾಂಗ್​ ನೀಡುತ್ತಿದ್ದಾರೆ. ಕನಕಪುರ ಮತ್ತು ಹಾರೋಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್​ ಪ್ರಾಭಲ್ಯದ ಜೊತೆಗೆ ಡಿ.ಕೆ ಸಹೋದರರ ಪ್ರಭಾವವೂ ಹೆಚ್ಚಿದೆ. ಈ ಎರಡೂ ತಾಲೂಕುಗಳನ್ನೇ ಪ್ರಮುಖವಾಗಿ ಟಾರ್ಗೆಟ್​ ಮಾಡಿಕೊಂಡಿರುವ ಡಾಕ್ಟರ್​ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಇಲ್ಲಿನ ಬಿಜೆಪಿ ಮತ್ತು ಜೆಡಿಎಸ್​ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್​ ಚನ್ನಪಟ್ಟಣದಲ್ಲಿ ಸ್ವಾತಂತ್ರೊ$್ಯತ್ಸವ ಧ್ವಜಾರೋಹಣ ಮಾಡುತ್ತಿದ್ದರೆ, ಇತ್ತು ಮಂಜುನಾಥ್​ ಕನಕಪುರದಲ್ಲಿ ತಾಲೂಕು ಆಢಳಿತದಿಂದ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಇಷ್ಟೇ ಅಲ್ಲದೆ, ಕನಕಪುರದಲ್ಲಿ ತಮ್ಮ ಕಚೇರಿಯನ್ನು ತೆರೆಯುವ ಮೂಲಕ ಸ್ಥಳಿಯರಿಗೆ ಸುಲಭವಾಗಿ ದೊರೆಯುವ ಕೆಲಸವನ್ನು ಮಾಡಿದ್ದಾರೆ.

ವೈಧ್ಯರ ಈ ಎಲ್ಲಾ ಕೆಲಸಗಳಿಗೆ ರಾಜಕೀಯದ ವಾತಾವರನದಲ್ಲಿಯೇ ಮಿಂದೆದಿದ್ದರುವ ಪತ್ನಿ ಅನಸೂಯ ಸಾಥ್​ ನೀಡುತ್ತಿರುವುದು ವಿಶೇಷ.

ಮಾಜಿ ಸಂಸದರೂ ಅಖಾಡದಲ್ಲಿ

ಸೋಲು ಕೆಲವರನ್ನು ವಿಚಲಿತಗೊಳಿಸುತ್ತದೆ. ಆದರೆ ಲೋಕಸಭೆ ಸೋಲಿನ ನಂತರ ಒಂದಿಷ್ಟು ಬೇಸರದಲ್ಲಿದ್ದ ಮಾಜಿ ಸಂಸದ ಡಿ.ಕೆ ಸುರೇಶ್​ ಈಗ ಮೈಕೊಡವಿ ನಿಂತಿದ್ದಾರೆ. ಕನಕಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ರಾಜಕೀಯ ಮತ್ತು ಅಭಿವೃದ್ಧಿ ಕೆಲಸಳಿಗೆ ಗಮನ ನೀಡುತ್ತಿದ್ದಾರೆ. ಇವರಿಗೆ ಕನಕಪುರ ಬಗರ್​ ಹುಕುಂ ಸಮಿತಿ ಅಧ್ಯಕ್ಷ ಸ್ಥಾನ ಮತ್ತು ರಾಜರಾಜೇಶ್ವರಿ ನಗರ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಸ್ಥಾನವೂ ದೊರೆತಿದೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಕಳೆದ ಸೋಲು ಮರುಕಳುಹಿಸದಂತೆ ಮಾಡಿಕೊಳ್ಳುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ರಾಮನಗರ ಜಿಲ್ಲೆಯ ಆಢಳಿತದಲ್ಲಿಯೂ ಡಿ.ಕೆ.ಸುರೇಶ್​ ಈಗಲೂ ಸಹ ಪ್ರಭಾವಿಯೇ ಉಳಿದಿರುವುದು ಇತ್ತೀಚಿಗೆ ಇವರು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ವೇಳೆಯಲ್ಲಿಯೇ ಸಾಬೀತಾಗಿದೆ.

ಒಟ್ಟಾರೆ ದೇವೇಗೌಡ ಮತ್ತು ಶಿವಕುಮಾರ್​ ಕುಟುಂಬದ ನಡುವಿನ ರಾಜಕೀಯ ಸಂರ್ಷ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಸಮರವಾಗಿ ಮಾರ್ಪಟ್ಟಿದೆ. ಇದರಲ್ಲಿ ಯಾರು ಜಯಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.