ಜಿಲ್ಲೆ

ಡಿಕೆಆರ್‌ಡಿಎಸ್‌ನಿಂದ ಕ್ರಿಸ್‌ಮಸ್ ಸ್ನೇಹಕೂಟ

Avinash R

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗ ಡಿಕೆಆರ್‌ಡಿಎಸ್ ನೇತೃತ್ವದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್‌ಮಸ್ ಸ್ನೇಹ ಕೂಟವು ಶುಕ್ರವಾರ ಸಾಂತೋಮ್ ಟವರ್‌ನಲ್ಲಿ ನಡೆಯಿತು.

ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ. ಪ್ರಾಸ್ತಾವಿಕ ಮಾತನಾಡಿದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಶುಭಹಾರೈಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯಾ ಅಪೋಸ್ತಲೇಟ್ ನಿರ್ದೇಶಕ ಫಾ.ಮ್ಯಾಥ್ಯೂ ತಾಯೇಕ್ಕಾಟ್ಟೀಲ್ ಕ್ರಿಸ್‌ಮಸ್ ಕೇಕ್ ಕತ್ತರಿಸಿ, ಕ್ರಿಸ್‌ಮಸ್ ಹಬ್ಬದ ಸಂದೇಶ ನೀಡಿದರು. ಪತ್ರಿಕೆ ಹಾಗೂ ಮೀಡಿಯಾ ಕ್ಲಬ್‌ನ ಸದಸ್ಯರಿಗೆ ಕಿರು ಕಾಣಿಕೆ ನೀಡಲಾಯಿತು.

ಮೀಡಿಯಾ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಜಿನಿ ಪಿ.ಜೆ. ವಂದಿಸಿದರು.