ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತ್ರತ್ವದ ಸಹಕಾರ ಬಳಗ ಜಯಭೇರಿ ಬಾರಿಸಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನ ಡಾ.ಎಂಎನ್‌ಆರ್ ನೇತ್ರತ್ವದ ತಂಡದ ಪಾಲಾಗಿದ್ದರೆ, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 6 ಸ್ಥಾನಗಳಲ್ಲಿ ಜಯ ಗಳಿಸಿದೆ.
ಕಳೆದ ಮೂರು ಅವಧಿಯಲ್ಲಿ ಸಹಕಾರಿ ಭಾರತಿ ವಶದಲ್ಲಿದ್ದ ಡಿಕೆಎಂಯುಎಲ್ ಅಧಿಕಾರ ಈಗ ಡಾ.ಎಂಎನ್‌ಆರ್ ನೇತ್ರತ್ವದ ತಂಡದ ಪಾಲಾಗಿದೆ. ಉಡುಪಿ ಜಿಲ್ಲೆಯ ಮಹಿಳಾ ಮೀಸಲು ಸ್ಥಾನ ಸಹಿತ ಎಲ್ಲ 8 ಸ್ಥಾನಗಳಲ್ಲಿ ಹಾಗೂ ದ.ಕ.ಜಿಲ್ಲೆಯ 2 ಸ್ಥಾನಗಳಲ್ಲಿ ಡಾ.ಎಂಎನ್‌ಆರ್ ನೇತ್ರತ್ವದ ತಂಡದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸಹಕಾರಿ ಭಾರತಿಯಿಂದ ಸ್ಪರ್ಧೆಗೆ ಅವಕಾಶ ನಿರಾಕರಿಸಿದ ಕಾರಣ ಡಾ.ಎಂಎನ್‌ಆರ್ ತಂಡದ ಮೂಲಕ ಸವಾಲೊಡ್ಡಿದ ನಿಕಟಪೂರ್ವ ಅಧ್ಯಕ್ಷ, ಬಿಜೆಪಿ ನಾಯಕ ಸುಚರಿತ ಶೆಟ್ಟಿ ಜಯ ಸಾಧಿಸಲು
ಯಶಸ್ಸಿಯಾಗಿದ್ದಾರೆ. ಮಾಜಿ ಅಧ್ಯಕ್ಷರಾದ ರವಿರಾಜ.ಎನ್.ಶೆಟ್ಟಿ ಜಯ ಗಳಿಸಿದರೆ ಕಾಪು ದಿವಾಕರ ಶೆಟ್ಟಿ ಪರಾಭವಗೊಂಡಿದ್ದಾರೆ. ಮಾಜಿ ಉಪಾಧ್ಯಕ್ಷರಾದ ಎಸ್.ಬಿ.ಜಯರಾಮ ರೈ, ಎಸ್.ಪ್ರಕಾಶ್‌ಚಂದ್ರ ಶೆಟ್ಟಿ ಪುನರಾಯ್ಕೆಗೊಂಡಿದ್ದಾರೆ.
ದ.ಕ.ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಸಂಬಂಧಿಸಿ ಸಹಕಾರ ಭಾರತಿ ಹಾಗೂ ಸಹಕಾರಿ ಬಳಗದ ಮಧ್ಯೆ ಮಾತುಕತೆ ನಡೆದಿತ್ತು. ಆದರೆ ಒಮ್ಮತದ ಆಯ್ಕೆ ಸಾಧ್ಯವಾಗದ ಕಾರಣ ಚುನಾವಣೆ ನಡೆದಿತ್ತು. ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ 41 ಮಂದಿ ಅಂತಿಮ ಕಣದಲ್ಲಿದ್ದರು.
*ಮೇ 7ರಂದು ಅಧ್ಯಕ್ಷ ಚುನಾವಣೆ :
ಮೇ 7ರಂದು ಮುಂದಿನ 5ವರ್ಷಗಳ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಹಕಾರ ಭಾರತಿಯಿಂದ ಗೆಲುವು ಸಾಧಿಸಿದ 6 ಮಂದಿಯ ಪೈಕಿ 2-3 ಮಂದಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾರಣ ಅಧ್ಯಕ್ಷ ಚುನಾವಣೆ ಸಂದರ್ಭ ಡಾ.ಎಂಎನ್‌ಆರ್ ನೇತ್ರತ್ವದ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎನ್ನುವ ಮಾಹಿತಿ ಇದೆ.
**ವಿಜೇತರು ಹಾಗೂ ಪಡೆದ ಮತಗಳ ವಿವರ (ಡಾ.ಎಂಎನ್‌ಆರ್ ನೇತ್ರತ್ವದ ತಂಡ)
ಕುಂದಾಪುರ ವಿಭಾಗ : ರವಿರಾಜ ಹೆಗ್ಡೆ -220, ಎಸ್.ಪ್ರಕಾಶ್‌ಚಂದ್ರ ಶೆಟ್ಟಿ-185, ಉದಯ .ಎಸ್.ಕೋಟ್ಯಾನ್-172,
ದೇವಿಪ್ರಸಾದ್ ಶೆಟ್ಟಿ ಬೆಳಪು-164, ಸುಧಾಕರ ಶೆಟ್ಟಿ-162, ಎನ್.ಮಂಜಯ್ಯ ಶೆಟ್ಟಿ-145, ಕೆ.ಶಿವಮೂರ್ತಿ-124
*ಉಡುಪಿ ಜಿಲ್ಲಾ ಮಹಿಳಾ ಸ್ಥಾನ : ಮಮತಾ.ಆರ್.ಶೆಟ್ಟಿ-190
* ಮಂಗಳೂರು ವಿಭಾಗ : ಸುಚರಿತ ಶೆಟ್ಟಿ -99 , ನಂದರಾಮ್ ರೈ-96
**ಸಹಕಾರಿ ಭಾರತಿ ತಂಡದ ವಿಜೇತ ಅಭ್ಯರ್ಥಿಗಳು
* ಮಂಗಳೂರು ವಿಭಾಗ : ಬಿ.ಸುಧಾಕರ ರೈ -97
* ಪುತ್ತೂರು ವಿಭಾಗ : ಎಸ್.ಬಿ.ಜಯರಾಮ ರೈ-190, ಭರತ್.ಎನ್.-173, ಕೆ.ಚಂದ್ರಶೇಖರ ರಾವ್-169,
ಎಚ್.ಪ್ರಭಾಕರ-157
* * ದ.ಕ. ಜಿಲ್ಲಾ ಮಹಿಳಾ ಸ್ಥಾನ : ಸವಿತಾ.ಎನ್.ಶೆಟ್ಟಿ-235
ಪರಾಭವಗೊಂಡವರು ಪಡೆದ ಮತ :
*ಕುಂದಾಪುರ ವಿಭಾಗ :
ಸುರೇಶ ಶೆಟ್ಟಿ-104, ದಿನಕರ ಶೆಟ್ಟಿ-96, ಕಾಪು ದಿವಾಕರ ಶೆಟ್ಟಿ -95, ಸುಬ್ಬಣ್ಣ ಶೆಟ್ಟಿ-94, ಕೆ.ಮೋಹನದಾಸ ಅಡ್ಯಂತಾಯ-85, ಭೋಜ ಪೂಜಾರಿ-77, ಅಶೋಕ್ ರಾವ್-77, ಟಿ.ವಿ.ಪ್ರಾಣೇಶ ಯಡಿಯಾಳ-73, ಕಮಲಾಕ್ಷ ಹೆಬ್ಬಾರ್-68,
ರವಿರಾಜ.ಎನ್.ಶೆಟ್ಟಿ-33, ಅಶೋಕ್ ಕುಮಾರ್ ಶೆಟ್ಟಿ-28,ಉಲ್ಲಾಸ್ ಶೆಟ್ಟಿ-28, ಎಂ.ಪ್ರಕಾಶ್ ಶೆಟ್ಟಿ-27, ಸರ್ವೋತ್ತಮ ಶೆಟ್ಟಿ-20
* ಮಂಗಳೂರು ವಿಭಾಗ : ಸುಭದ್ರಾ.ಎನ್.ರಾವ್-79, ಸುದೀಪ್.ಆರ್.ಅಮೀನ್-83, ಸುದರ್ಶನ ಜೈನ್-22
*ಪುತ್ತೂರು ವಿಭಾಗ : ಜಗನ್ನಾಥ ಶೆಟ್ಟಿ-51, ಪಿ.ರಮೇಶ್ ಪೂಜಾರಿ -36, ರಾಮಕೃಷ್ಣ.ಡಿ.-36
* ದ.ಕ. ಜಿಲ್ಲಾ ಮಹಿಳಾ ಸ್ಥಾನ : ಶರ್ಮಿಳಾ.ಕೆ.-99, ಅನುರಾ ವಾಯೋಲಾ ಡಿಸೋಜಾ-32, ಉಷಾ ಅಂಚನ್-5
*ಉಡುಪಿ ಜಿಲ್ಲಾ ಮಹಿಳಾ ಸ್ಥಾನ : ಸ್ಮಿತಾ.ಆರ್.ಶೆಟ್ಟಿ -67, ಶಾಂತ.ಎಸ್.ಭಟ್-60
...........................