ಜಿಲ್ಲೆ

ಸುರೇಶ್ ಮುನಿರತ್ನ ಹಸ್ತಲಾಘವ


ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಗುರುವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಮಾ. 28 ರಂದು ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದ ಡಿಕೆ ಸುರೇಶ್ ಮತ್ತೊಂದು ಸೆಟ್ ನಾಮಪತ್ರವನ್ನು ಕ್ಷೇತ್ರ ಚುನಾವಣಾಧಿಕಾರಿಯೂ ಆದ ಡಾ ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಸಲ್ಲಿಸಿದರು.

ಯಾವುದೇ ಅಭ್ಯರ್ಥಿ ಮೂರು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎನ್ ಡಿಐ ಮೈತ್ರಿ ಅಭ್ಯರ್ಥಿ ಡಾ .ಸಿ.ಎನ್ ಮಂಜುನಾಥ್ ನಾಮಪತ್ರ ಸಲ್ಲಿಕೆಗೂ ಮುನ್ನವೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಶಾಸಕ ಎಚ್ ಎ ಇಕ್ಬಾಲ್ ಹುಸೇನ್ , ವಿಧಾನ ಪರಿಷತ್ ಸದಸ್ಯ ಎಸ್ ರವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಗಂಗಾಧರ್ ಸಾಥ್ ನೀಡಿದರು.

ಮುನಿರತ್ನ ಹಸ್ತಲಾಘವ

ನಾಮಪತ್ರ ಸಲ್ಲಿಸಿ ಹೊರ ಬಂದ ಡಿಕೆ ಸುರೇಶ್ ಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಹಾಗೂ ರಾಜಕೀಯ ಕಡುವೈರಿ ಆಗಿರುವ ಮುನಿರತ್ನ ಎದುರಾದರು. ಈ ವೇಳೆ ಇಬ್ಬರೂ ನಗು ನಗುತ್ತಲೇ ಹಸ್ತಲಾಘವ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಇದರ ಜೊತೆಗೆ ಮಂಜುನಾಥ್ ಪಾಳಯದಲ್ಲಿ ಇದ್ದ ಸುಧಾ ಬರಗೂರು ಅವರಿಗೂ ಕೈ ಜೋಡಿಸಿ ನಮಸ್ಕಾರ ಮಾಡಿ ತೆರಳಿದರು.