ಬೆಳಗಾವಿ : ಇತಿಹಾಸ ತಿರುಚುವ ಉರಿಗೌಡ-ನಂಜೇಗೌಡ ಸಿನಿಮಾಮೂಲಕ ದೇಶದ ಐಕ್ಯತೆ, ಶಾಂತಿ ಕದಡುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿಟಿ ರವಿ ಹಿಂದು ವಿರೋಧಿಗಳು, ಒಕ್ಕಲುತನದ ವಿರೋಧಿಗಳು. ಈ ಸಿನಿಮಾ ನಿರ್ಮಿಸುವುದರಿಂದ ಒಕ್ಕಲಿಗರಿಗೆ ಅಪಮಾನವಾಗಿದೆ. ಅವರ ವಿರುದ್ದ ಸಮಾಜ ಸಿಡಿದೇಳಬೇಕು, ಹೋರಾಟದ ಮುಂದಾಳತ್ವವನ್ನು ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಎಲ್ಲ ಸಮಾಜದ ಮಠಾದೀಶರು ನೇತೃತ್ವ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು, ಸ್ವಾಮೀಜಿಗಳು ಹೋರಾಟದ ಮುಂದಾಳತ್ವ ಮೊದಲು ತೆಗೆದುಕೊಳ್ಳಬೇಕು. ಯಾರನ್ನೋ ಕರೆದು ಮಾತಾಡುವುದಲ್ಲ, ಎಲ್ಲಾ ಸ್ವಾಮೀಜಿಗಳು ಇದನ್ನ ಮುಂದಾಳತ್ವ ವಹಿಸಬೇಕು. ಅವರು ಚುನಾವಣೆ ಹೊಸ್ತಿಲಲ್ಲಿ ದ್ವಾರ ಯಾಕೆ ನಿರ್ಮಾಣ ಮಾಡಿದರು? ಫಿಲಂ ಡೈರೆಕ್ಟರ್‍ಗಳು ಮಂತ್ರಿಗಳು ಸಿನಿಮಾ ಮಾದರಿಯಲ್ಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಮಹಾರಾಜರ ತ್ಯಾಗ ಎನೂ, ಟಿಪ್ಪು ತ್ಯಾಗ ಎನೂ, ಧರ್ಮಗುರುಗಳ ತ್ಯಾಗ ಎನೂ? ಎಲ್ಲವೂ ನಮಗೆ ಗೊತ್ತಿದೆ. ಸ್ವಾಮೀಜಿಗಳು ಹೋರಾಟ ಮಾಡದಿದ್ದರೆ ನಮ್ಮ ನಿರ್ಣಯ ತಿಳಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಟಿಪ್ಪು ಸೇರಿ ರಾಷ್ಟ್ರದ ಮಹಾನ ನಾಯಕರ ಚರಿತ್ರೆ ತಿರುಚಲು ಹೋರಟಿದ್ದಾರೆ. ಎರಡು ಶತಮಾನದ ಬಳಿಕ ಟಿಪ್ಪುವಿನ ಕುರಿತು ಚಿತ್ರ ತಯಾರಿಸಲು ಹೊರಟಿದ್ದಾರೆ. ಶೋಭಕ್ಕ, ಅಶ್ವಥ್ ನಾರಾಯಣ, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ಹೊಸದಾಗಿ 50 ಗ್ರಂಥಗಳು ಇವೆ. ಹೊಸದಾಗಿ ಉರಿಗೌಡ ನಂಜೇಗೌಡ ಸೃಷ್ಟಿಸಿ, ಜಾತಿ ಬಣ್ಣ ಕಟ್ಟುವ ಮೂಲಕ ಚಿತ್ರ ಮಾಡಲು ಹೊರಟಿದ್ದಾರೆ. ಇತಿಹಾಸ ಬದಲಾವಣೆ ಮಾಡಿ ಧಕ್ಕೆ ತರಲು ಹೊರಟಿರುವುದು ಸರಿಯಲ್ಲ. ಇದರ ವಿರುದ್ದ ಎಲ್ಲ ಮಠಾಧೀಶರು, ಕನ್ನಡಪರ ಹೋರಾಟಗಾರರು ಧ್ವನಿ ಎತ್ತುವ ಮೂಲಕ ಇತಿಹಾಸಕ್ಕೆ ಧಕ್ಕೆ ಬಾರದಂತೆ ಹೋರಾಟ ನಡೆಸಬೇಕು ಎಂದ ಅವರು, ಮಂಡ್ಯದಲ್ಲಿ ಯಾರೊಬ್ಬರು ಪುಸ್ತಕ ಬರೆದ್ರೆ ಅದು ಇತಿಹಾಸ ಆಗಲು ಸಾಧ್ಯವಿಲ್ಲ. 200 ವರ್ಷಗಳ ಹಿಂದೆ ನಡೆದ ಘಟನೆಗಳ ಇವೆ. ಉರಿಗೌಡ, ನಂಜೇಗೌಡ ಚಿತ್ರ ಸೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವವರ ಮೇಲೆ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.
ನಾಲ್ಕು ವರ್ಷ ಸರ್ಕಾರ ನಡೆಸಿ ಚುನಾವಣಾ ಪೂರ್ವದಲ್ಲಿ ಆರುನೂರು ಭರವಸೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಯಾವ ವಿಚಾರದಲ್ಲಿ ಯೋಚನೆ ಮಾಡುತ್ತದೆಯೋ ಅದನ್ನು ಅವರು ಅನುಸರಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಯೋಚನೆ ಮಾಡಿದ್ದಾಗ ಅದರ ಬಗ್ಗೆ ಯೋಜನೆ ಮಾಡಿದರು. ಆದರೆ, ರೈತರಿಗೆ ಬೆಂಬಲ ಕೊಡುತ್ತೇವೇ ಎಂದರೂ ಕೊಡಲಿಲ್ಲ, ಈ ಸರ್ಕಾರದಲ್ಲಿ ಯೋಜನೆಗಳ ದಿಕ್ಸೂಚಿ ನಾವು ಪಿಕ್ಸ್ ಮಾಡ್ತಿದ್ದೇವೆ ಅವರು, ಅದನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರವು ದೇಶದಲ್ಲೇ ಭ್ರಷ್ಟಾಚಾರ ಸರ್ಕಾರ ಎಂಬ ಬಿರುದು ಪಡೆದುಕೊಂಡಿದೆ. ಶಾಸಕರೇ ಏಜೆಂಟ್ ಆಗಿದ್ದುಕೊಂಡು ಭ್ರಷ್ಟಾಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರ ಇದ್ದಾಗ ಘೋಷಣೆ ಮಾಡದವರೂ ಈಗ ಮಾಡಿದರೇ ಎನೂ ಪ್ರಯೋಜನ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನಯ ನಾವಲಗಟ್ಟಿ ಇದ್ದರು.