ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ವತಿಯಿಂದ 25ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿ ಜು.22ರಿಂದ ಆ.15ರ ತನಕ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ.
ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಲಿದ್ದಾರೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆ (ಬಾಲಕರು ಹಾಗೂ ಬಾಲಕಿಯರು), ಪಿಯು ಕಾಲೇಜು ಹಾಗೂ ಪದವಿ ಕಾಲೇಜು, ವೃತ್ತಿಪರ ಖಾಲೇಜು ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಟೂರ್ನಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಡಿ.ಎಂ.ಅಸ್ಲಂ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಉತ್ತಮ ಆಟಗಾರ, ಆಟಗಾರ್ತಿ ಮೊದಲಾದ ವೈಯಕ್ತಿಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಉಪಾಧ್ಯಕ್ಷ ಬಿ.ಬಿ.ಥೋಮಸ್, ಕಾರ‌್ಯದರ್ಶಿ ಮಹಮ್ಮದ್ ಹುಸೇನ್ ಬೋಳಾರ, ಕೋಶಾಧಿಕಾರಿ ಫಿರೋಜ್ ಉಳ್ಳಾಲ್‌ಉಪಸ್ಥಿತರಿದ್ದರು.
ಕ್ವೋಟ್
ದಕ್ಷಿಣ ಕನ್ನಡ, ಉಡುಪಿ, ಭಟ್ಕಳ, ಮಡಿಕೇರಿ ಕಡೆಗಳ ತಂಡಗಳು ಪಂದ್ಯಾಟಗಳು ಭಾಗವಹಿಸಲಿವೆ. ಕಳೆದ ಬಾರಿ 216 ತಂಡಗಳು ಭಾಗವಹಿಸಿದ್ದು, ಈ ಬಾರಿ 250ಕ್ಕೂ ಅಧಿಕ ತಂಡಗಳ ನಿರೀಕ್ಷೆಯಿದೆ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದ ನೋಂದಣಿಗೆ ಜುಲೈ 20 ಹಾಗೂ ಪಿಯು ಕಾಲೇಜು 25, ಪದವಿ ಕಾಲೇಜು ವಿಭಾಗದ ನೋಂದಣಿಗೆ ಜುಲೈ 30 ಕಡೆಯ ದಿನಾಂಕ.
ಡಿ.ಎಂ.ಅಸ್ಲಂ
ದ.ಕ. ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ