ಜಿಲ್ಲೆ

ಚಂದ್ರಯಾನ 3 ಯಶಸ್ಸಿಗೆ ದ.ಕ.ಜಿಲ್ಲಾ ಬಿಜೆಪಿ ಹರ್ಷ

Mangaluru - Hariprasad Rai


ಮಂಗಳೂರು : ಚಂದ್ರಯಾನ 3 ಯಶಸ್ಸಿಗೆ ದ.ಕ.ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತ ಪಡಿಸಿದೆ. ಒಂದು ಕಾಲಘಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಋಷಿ ಪರಂಪರೆಯ ಕೊಡುಗೆಯಿಂದ ಜಗತ್ತಿನಲ್ಲಿ ಭಾರತ ಅಗ್ರಮಾನ್ಯ ಸ್ಥಾನದಲ್ಲಿತ್ತು. ಈಗ ಮತ್ತೊಮ್ಮೆ ಚಂದ್ರಯಾನ 3 ಯಶಸ್ವಿಯಿಂದ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರಮಾನ ಸ್ಥಾನ ಅಲಂಕರಿಸಿದ್ದು ನಮ್ಮ ಸೌಭಾಗ್ಯ. ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋದ ಅಧ್ಯಕ್ಷ ಎಸ್.ಸೋಮನಾಥ್, ಎಲ್ಲ ವಿಜ್ಞಾನಿಗಳಿಗೆ,ಇಸ್ರೋದ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
....................