ಜಿಲ್ಲೆ

ಪ್ರಧಾನಿ ಸಮಾವೇಶಕ್ಕೆ ದಾಖಲೆ ಸಂಖ್ಯೆಯ ಕಾರ್ಯಕರ್ತರು- ಬಿಜೆಪಿ ದಕ ಜಿಲ್ಲಾಧ್ಯಕ್ಷ ಸುದರ್ಶನ ವಿಶ್ವಾಸ

reportermng

ಮಂಗಳೂರು: ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸೆಪ್ಟಂಬರ್ 2 ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


1461 ಬಸ್, 200 ಟೆಂಪೋ ಟ್ರಾವೆಲ್ ಗಳ ಬುಕ್ಕಿಂಗ್ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಬರಲಿದ್ದಾರೆ. ಎನ್‌ಎಂಪಿಎ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ಕೆಲ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಮೂರು ಗಂಟೆಯ ತನಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.


ಈಗಾಗಲೇ ಕಾರ್ಯಕ್ರಮದ 80 ಶೇ. ಪೂರ್ವ ಸಿದ್ಧತೆ ಪೂರ್ಣಗೊಂಡಿದೆ. ಕಾರ್ಯಕ್ರಮದಲ್ಲಿ 70 ಸಾವಿರ ಮಂದಿ ಕೇಂದ್ರ ದ ಯೋಜನೆಯ ಫಲಾನುಭಾವಿಗಳು ಭಾಗಿಯಾಗಲಿದ್ದಾರೆ. ಒಟ್ಟು ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.