ಜಿಲ್ಲೆ

ದ.ಕನ್ನಡ, ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಅಧ್ಯಕ್ಷರಾಗಿ ದೀಪಕ್ ರಾಜ್ ಉಳ್ಳಾಲ್


ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಉಡುಪಿ ಇದರ ಮಹಾಸಭೆ ಇತ್ತೀಚೆಗೆ ಜರಗಿತು. ಪ್ರಖ್ಯಾತ ತಬಲಾ ಕಲಾವಿದ ದೀಪಕ್ ರಾಜ್ ಉಳ್ಳಾಲ್ ಅವರು 2023 - 24ನೇ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.


ಉಪಾಧ್ಯಕ್ಷರಾಗಿ ಐವನ್ ರಿಚರ್ಡ್ ಡಿಸೋಜ ಮಂಗಳೂರು , ರಾಧಾಕೃಷ್ಣ ಭಟ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ಕೇಶವ ಕನಿಲ, ಜತೆ ಕಾರ್ಯದರ್ಶಿಗಳಾಗಿ ಚೈತ್ರ ಕಡಂಬಾರ್ ಮಂಗಳೂರು, ಜನಾರ್ದನ ಪದ್ಮಶಾಲಿ ಉಡುಪಿ, ಖಜಾಂಚಿಯಾಗಿ ಸತೀಶ್ ಇರಾ, ಸಂಘಟನಾ ಕಾರ್ಯದರ್ಶಿ ದಿನಕರ್ ಪಾಂಡೇಶ್ವರ್ ಮಂಗಳೂರು, ಸುಭಾಷಿತ್ ಉಡುಪಿ, ಸಂಚಾಲಕರಾಗಿ ರಾಮ್ ಕುಮಾರ್ ಮಂಗಳೂರು, ಮುಕ್ತ ಶ್ರೀನಿವಾಸ್ ಉಡುಪಿ. ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಮೂಲ್ಕಿ, ಧನುರಾಜ್ ಅತ್ತಾವರ, ಜ್ಯೋತಿ, ಧನ್ಯಶ್ರೀ, ವಿ.ಜೆ.ದೇವಿಪ್ರಸಾದ್, ರವಿ ಕೊಪ್ಪ, ಕ್ಲಿಫರ್ಡ್ ಡಿಸೋಜ, ಸುಶ್ಮಿತಾ, ಪ್ರಕಾಶ್ ಗಟ್ಟಿ, ದಿನೇಶ್ ನಾಯಕ್ ಆಯ್ಕೆಗೊಂಡರು.


ವಿ.ರಾಘವೇಂದ್ರ, ಹಾಗೂ ಕೆ.ಆರ್. ಕಾರಂತ್ ಅವರನ್ನು ಆಂತರಿಕ ಲೆಕ್ಕ ಪರಿಶೋಧಕರಾಗಿ ಅಂಗೀಕರಿಸಲಾಯಿತು.
ಒಕ್ಕೂಟದ ಕಾನೂನು ಸಲಹೆಗಾರ ನ್ಯಾಯವಾದಿ ಸತೀಶ್ ಭಟ್ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನಿಕಟ ಪೂರ್ವ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಅವರು ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.