ಕಾರವಾರ: ಗಣೇಶೋತ್ಸವದಲ್ಲಿ ಧ್ವನಿವರ್ಧಕ ಹಾಗೂ ಡಿಜೆ ನಿಷೇಧಕ್ಕೆ ವಿರೋಧ ವ್ಯಕ್ತವಾಗಿದೆ. ಭಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಗುರುವಾರ ಭೇಟಿಯಾಗಿ ತಮ್ಮ ಆಕ್ಷೇಪಣೆ ಸಲ್ಲಿಸಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಬೆಂಬಲ ನೀಡಿದರು.
ಬಾಲಗಂಗಾಧರ ತಿಲಕರು 1893 ರಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಬಿಸಿದರು. ಸಾರ್ವಜನಿಕ ಗಣೇಶೋತ್ಸವ ಸ್ವಾತಂತ್ರ÷್ಯ ಚಳುವಳಿಗೆ ಪ್ರೇರಣೆಯಾಯಿತು. ಜಿಲ್ಲೆಯಲ್ಲೂ ಡಿಜೆ ಹಾಗೂ ಧ್ವನವರ್ಧಕ, ಡೋಲು ಮುಂತಾದವುಗಳೊAದಿಗೆ ಬಹಳ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಆದರೆ, ಈಗ ಸರ್ಕಾರ ಧ್ವನಿವರ್ಧಕ ಹಾಗೂ ಡಿಜೆ ನಿಷೇಧ ಮಾಡಿದ್ದು, ಹಿಂದು ಶ್ರದ್ಧಾಳುಗಳ ಭಾವನೆಗೆ ಧಕ್ಕೆಯಾಗಿದೆ. ಲಕ್ಷಾಂತರ ರೂ.ವ್ಯಯಿಸಿ, ಧ್ವನಿವರ್ಧಕ, ಡಿಜೆ ಮಾಡಿದ ವ್ಯಕ್ತಿಗಳಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧ್ವನಿವರ್ಧಕ ಡಿಜೆಯೊಂದಿಗೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಲಾಗಿದೆ. ಶನಿವಾರ ಈ ಸಂಬAಧ ಎಲ್ಲ ಗಣೇಶೋತ್ಸವ ಸಮಿತಿ ಅಧ್ಯಕ್ಷರ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಡಿಸಿ ಕೆ.ಲಕ್ಷ್ಮೀಪ್ರಿಯಾ ಅವರು ವಿವರಿಸಿದರು.