ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಬಲಮುರಿ ಗಣಪತಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜಾ ಕೈಂಕರ್ಯ ನಡೆಯಿತು . 
ಜಿಲ್ಲೆ

ಬಲಮುರಿ ಗಣಪತಿ ದೇಗುಲದಲ್ಲಿ ದೀಪಾವಳಿ ಪೂಜೆ

ಕೊಳ್ಳೇಗಾಲ: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಬಲಮುರಿ ಗಣಪತಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜಾ ಕೈಂಕರ್ಯ ಜರುಗಿತು.

ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ಮುಂಜಾನೆಯಿಂದ ಪಂಚಾಮೃತ ಪೂರ್ವಕ, ಮಹಾಗಣಪತಿ ಅಥರ್ವ, ತೀರ್ಥಾಭಿಷೇಕ, ರುದ್ರಾಭಿಷೇಕ, ಅರ್ಚನೆ ಮಹಾ ಮಂಗಳಾರತಿ ಪೂಜೆಗಳು ನಡೆಯಿತು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಮೋಳೆ ಬಡಾವಣೆಯ ದಿ.ನಂಜಶೆಟ್ಟಿ ಅವರ ಪುತ್ರ ವರದರಾಜು ಹಾಗೂ ನಗರಸಭೆ ಮಾಜಿ ಸದಸ್ಯೆ ಶಾರದಾ ವರದರಾಜು ಇಂದಿನ ಸೇವಾರ್ಥ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕ ಶಿವರಾಮ್ ಪೂಜಾ ಕೈಂಕರ್ಯ ನೆರವೇರಿಸಿದರು.