ಇಂಡಿ ತಾಲೂಕಿನ ತಡವಲಗಾದದಲ್ಲಿ ಆಯೋಜಿಸಿದ್ದ ಲ ದೀಪೋತ್ಸವ ಕಾರ್ಯಕ್ರಮಕ್ಕೆ ಉಜೈನಿ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ದೀಪ ಬೆಳಗಿಸಿ ಚಾಲನೆ ನೀಡಿದರು. ಚಂದ್ರಶೇಖರ ಶಿವಾಚಾರ್ಯರು, ರೇಣುಕಾ ಶಿವಾಚಾರ್ಯರು, ಅಭಿನವ ಮುರುಂದ್ರ ಸ್ವಾಮೀಜಿ ಇತರರಿದ್ದಾರೆ. 
ಜಿಲ್ಲೆ

ಜ್ಞಾನದೆಡೆಗೆ ಸಾಗುವ ಸಂಕೇತ ದೀಪಾವಳಿ

ಇಂಡಿ: ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ ಎಂದು ಉಜೈನಿ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ತಾಲೂಕಿನ ತಡವಲಗಾ ಗ್ರಾಮದಲ್ಲಿ ಕಾರ್ತಿಕ ಮಾಸದ ಜೋಡಗುಡಿಯ ಮರುಳಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ಲ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ನವರಾತ್ರಿಯ ನಂತರ ಬರುವ ದೀಪಾವಳಿಯು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಪ್ರಯಾಣವನ್ನು ಸೂಚಿಸುತ್ತದೆ. ದೀಪಾವಳಿಯ ಹಬ್ಬದಂದು ಬರುವ ಕಾರ್ತಿಕ ಮಾಸ ಕೂಡ ತನ್ನದೆ ಮಹತ್ವ ಹೊಂದಿದೆ ಎಂದರು.

ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಮಮದಾಪೂರ ಅಭಿನವ ಮುರುಂದ್ರ ಸ್ವಾಮೀಜಿ, ಅಗರಖೇಡ ಪ್ರಭುಲಿಂಗ ಸ್ವಾಮೀಜಿ, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಾಬುಸಾಹುಕಾರ, ಬಸವರಾಜ ಇಂಡಿ, ತಮ್ಮಣ್ಣ ಪೂಜಾರಿ, ತಮ್ಮಾರಾಯ ಮಿರ್ಜಿ, ಭೀಮರಾಯ ಪಂತೋಜಿ, ಕಲ್ಲಪ್ಪ ಂಟಿ, ಎಂ.ಆರ್​.ಬೇಗ್​, ಯಶವಂತ ಖಸ್ಕಿ ಇದ್ದರು.