ಜಿಲ್ಲೆ

ದಮನಿತರ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ : ನ.ಸೀತಾರಾಮ ಹೇಳಿಕೆ

ಕಡಬ: ಮೇಲು, ಕೀಳು ಭಾವನೆ ಸಮಾಜದಲ್ಲಿ ಸಲ್ಲದು. ಎಲ್ಲ ಹಿಂದುಗಳು ಸವಾನರು ಅವರನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ನಾವು ಕೀಳರಿಮೆ ಮತ್ತು ದುಶ್ಟಟಗಳನ್ನು ಬಿಡಬೇಕು. ಆ ಮೂಲಕ ಸವಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಾ ಸಂದ ಪ್ರಾಂತ ಸಹಸೇವಾ ಪ್ರಮುಖ್ ನ.ಸೀತಾರಾಮ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂದ ಸಾಮರಸ್ಯ ಮಂಗಳೂರು ವಿಭಾಗ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕಡಬ ಗ್ರಾಮದ ಮಜ್ಜೆಗುಡ್ಡೆ ಕಾಲನಿಯಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಸಮಾರಂಭದ ಅಂಗವಾಗಿ ಚೋಂಕ್ರ ಮತ್ತು ಸುಂದರ ಎಂಬುವರ ಮನೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು.

ವಿವೇಕಾನಂದ ವಿದ್ಯಾವರ್ಧಕ ಸಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ಮಂಕುಡೆ, ಪ್ರಮುಖರಾದ ರವಿರಾಜ ಶೆಟ್ಟಿ ಕಡಬ, ಕೃಷ್ಣ ಶೆಟ್ಟಿ ಕಡಬ, ನವೀನ್ ನೆರಿಯ, ಶ್ರೀಕೃಷ್ಣ ಎಂ. ಆರ್., ವಾಸುದೇವ ಭಟ್ ಕಡ್ಯ, ಪ್ರಮೋದ್ ಕುವಾರ್ ನಂದುಗುರಿ, ಮಹೇಶ್ ರೈ ಕುಂಟೋಡಿ, ಪ್ರಮೀಳಾ ಲೋಕೇಶ್, ಸುಜಿತ್ ಕುಂಡಡ್ಕ, ಅಜಿತ್ ರೈ, ಸಾಮರಸ್ಯದ ಮಂಗಳೂರು ವಿಭಾಗದ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು, ಹೇಮಚಂದ್ರ ಮರ್ಕಂಜ, ಸಾಮರಸ್ಯ ದ ಪುತ್ತೂರು ಜಿಲ್ಲೆಯ ಸಂಯೋಜಕ ಸುಧಾಕರ ಶೆಟ್ಟಿ, ಸಾಮರಸ್ಯದ ಪುತ್ತೂರು ಜಿಲ್ಲೆಯ ಸಹ ಸಂಯೋಜಕ ಶ್ರೀಕುವಾರ್ ಹಾಗೂ ಮಜ್ಜಗುಡ್ಡೆ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

ಸಾಮರಸ್ಯದ ಜಿಲ್ಲಾ ಸಹ ಸಂಯೋಜಕ ರವೀಶ್ ಪಡುಮಲೆ ಸ್ವಾಗತಿಸಿದರು. ಉಮೇಶ್ ಗೋಳಿಯಡ್ಕ ಆಶಯ ಗೀತೆ ಹಾಡಿದರು.

12 ಮನೆಗಳಲ್ಲಿ ದೀಪ ಪ್ರಜ್ವಲನ

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಿಂದ ದೀಪ ಜ್ಯೋತಿಯೊಂದಿಗೆ ಮಜ್ಜಗುಡ್ಡೆ ಕಾಲನಿಗೆ ಆಗಮಿಸಿದ ಪ್ರಮುಖರು ಮಜ್ಜಗುಡ್ಡೆಯ ಸುವಾರು 12 ಮನೆಗಳಲ್ಲಿ ದೀಪ ಪ್ರಜ್ವಲಿಸಿದರು. ಗೋವಾತೆಗೆ ದೀಪಾರತಿ ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬಳಿಕ ಚೋಂಕ್ರ ಅವರ ಮನೆಯಲ್ಲಿ ಸಹಭೋಜನ ನಡೆಯಿತು.