ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ ದ.ಕ ಹಾಗೂ ಉಡುಪಿ ಜಿಲ್ಲೆ ಮಂಗಳೂರು ವಲಯದ ವತಿಯಿಂದ ರಜತ ಸಂಭ್ರಮ-2025-26 ಅಂಗವಾಗಿ ಲಲಿತಾ ಗೀತಾ ಅನಾಥಶ್ರಮದಲ್ಲಿ ಹಿರಿಯರ ಜೊತೆ ದೀಪಾವಳಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 
ಜಿಲ್ಲೆ

ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನಿಂದ ಅನಾಥಶ್ರಮದಲ್ಲಿ ದೀಪಾವಳಿ ಸಂಭ್ರಮ

ಮಂಗಳೂರು: ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ ದ.ಕ ಹಾಗೂ ಉಡುಪಿ ಜಿಲ್ಲೆ ಮಂಗಳೂರು ವಲಯದ ವತಿಯಿಂದ ರಜತ ಸಂಭ್ರಮ-2025-26 ಅಂಗವಾಗಿ ಲಲಿತಾ ಗೀತಾ ಅನಾಥಶ್ರಮದಲ್ಲಿ ಹಿರಿಯರ ಜೊತೆ ದೀಪಾವಳಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಅಸೋಸಿಯೇಶನ್‌ನ ರಜತ ಸಂಭ್ರಮದ ಅಂಗವಾಗಿ ಪ್ರಶಾಂತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಸಧಸ್ಯರ ಜೊತೆ ಸೇರಿ, ಲಲಿತಾ ಗೀತಾ ಅನಾಥಶ್ರಮಕ್ಕೆ ಬೇಟಿ ನೀಡಿ ದೀಪಾವಳಿ ಯ ಮೊದಲನೆ ದಿನದಂದು ಹಿರಿಯರ ಜೊತೆ ಸೇರಿ ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಿಸಲಾಯಿತು, ವೃಧ್ದರಿಗೆ ಹಲವು ರೀತಿಯ ಆಟ ಆಡಿಸಲಾಯಿತು. ಇವರೊಂದಿಗೆ ಬೆಸೆಂಟ್ ಇವಿನಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ಯಾಪ್ಟೀಸ್ ಸ್ಪೋರ್ಟ್ಸ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಸದಸ್ಯರು ಪಾಲ್ಗೊಂಡರು.

ಸಂಘದ ಉಪಾಧ್ಯಕ್ಷ ಶ್ರೀಕಾಂತ್ ತಿಲಕ್, ಪ್ರಧಾನ ಕಾರ್ಯದರ್ಶಿ ನವೀನ್ ಬಂಗೇರ, ಕೋಶಾಧಿಕಾರಿ ನಿಖಿಲ್ ಡಿಸೋಜ, ಛಾಯ ಕಾರ್ಯದರ್ಶಿ ಸ್ವೀಟನ್ ಪಿಂಟೊ, ಗೌರವಧ್ಯಕ್ಷರು ಮಧು ಮಂಗಳೂರು, ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು , ವಲಯದ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶೈಲೇಶ್ ವಂದಿಸಿದರು.