ಬೇಲೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ದಿವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ತಿಳಿಸಿದರು.
ಬೇಲೂರು ಪಟ್ಟಣದ ನೆಹರು ನಗರದಲ್ಲಿರುವ ದಿವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 28 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ವಿದ್ಯಾರ್ಥಿನಿ ಚಂದನ ಶೇ. 96.16, ಆರ್.ಗುರುಕಿರಣ್ ಶೇ.92.32, ಎಸ್.ರಕ್ಷಿತಾ, ಶೇ.92, ಉಮ್ಮೇ ಹಬೀಬಾ ಶೇ.91.4 ಪಡೆದರೆ ಇನ್ನುಳಿದಂತೆ ಕೆ.ವೈ.ಉಷಾ ಶೇ.89.76, ಸಿ.ಪಿ.ತೇಜಸ್ ಶೇ.89.76, ಬಿಂದು ಶೇ.89.44, ಜೆ.ವರ್ಷಿಣಿ.ಜೆ ಶೇ.89.28, ಎಂ.ಜಿ. ಆಕಾಶ್ ಶೇ.88.96, ಎ.ಎಲ್. ಅಶ್ವಿನಿ ಶೇ. 88.32, ಮಾಷಿತಾ ಶೇ.87.04, ಎಚ್.ಆರ್.ಶರತ್ ಶೇ.86.08ರಷ್ಟು ಅಂಕ ಗಳಿಸಿದ್ದಾರೆ. 14 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಒಬ್ಬರು ಮಾತ್ರ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ರಷ್ಟು ಫಲಿತಾಂಶದೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.