ಜಿಲ್ಲೆ

ಸಾರಿಗೆ ಸಂಸ್ಥೆ ಅಂತರ್​ ವಿಭಾಗೀಯ ಕ್ರಿಕೆಟ್​

Dharwada - Basavaraj Idli

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ ಗ್ರಾಮಾಂತರ, ನಗರ ಸಾರಿಗೆ, ಧಾರವಾಡ ಗ್ರಾಮಾಂತರ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ವಿಭಾಗಗಳ ಸಿಬ್ಬಂದಿಗಾಗಿ ಅಂತರ್ವಿಭಾಗೀಯ ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಸಂತೋಷನಗರದ ಬಿ.ಡಿ.ಕೆ ಸ್ಪೋರ್ಟ್ಸ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು.

ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಂದ್ಯಾವಳಿ ಆಯೊಜಿಸಲಾಗಿದೆ. ನೌಕರರಲ್ಲಿ ಪರಸ್ಪರ ಸೌಹಾರ್ದತೆ ಮೂಡಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದರು.

ಕೇಂದ್ರ ಕಚೇರಿ ಇಲಾಖಾ ಮುಖ್ಯಸ್ಥ ಪಿ.ವೈ. ನಾಯಕ, ಗಣೇಶ ರಾಠೋಡ, ವಿಜಯಶ್ರೀ ನರಗುಂದ, ಜಗದಂಬಾ ಕೋಪರ್ಡೆ, ಉಪಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ವಿಜಯಕುಮಾರ ಹಾಗೂ ಅಧಿಕಾರಿಗಳಾದ ಎಂ.ಬಿ. ಕಪಲಿ, ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ, ಎಂ. ಸಿದ್ಧಲಿಂಗೇಶ, ಎಚ್. ರಾಮನಗೌಡರ್ ಉಪಸ್ಥಿತರಿದ್ದರು.

9 ವಿಭಾಗಗಳು, ಕೇಂದ್ರ ಕಚೇರಿ, ಪ್ರಾದೇಶಿಕ ಕಾರ್ಯಾಗಾರ ಮತ್ತು ಅಧಿಕಾರಿಗಳ ತಂಡ ಸೇರಿ 12 ತಂಡಗಳು ಭಾಗವಹಿಸಿದ್ದವು.