ಹುಬ್ಬಳ್ಳಿ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಬ್ರಹ್ಮಕುಮಾರೀಸ್ ಶಿಕ್ಷಣ ವಿಭಾಗ ವತಿಯಿಂದ ‘ನಮ್ಮ ಪ್ರೀತಿಯ ಶಿಕ್ಷಕರು’ ಯೋಜನೆಯಡಿ ಇಲ್ಲಿನ ಗಾಂಧಿನಗರದ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಮದಲ್ಲಿ ಭಾನುವಾರದಂದು ಶಾಲಾ ಶಿಕ್ಷಕರಿಗೆ ಈಶ್ವರೀಯ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಶಾಲಾ ಶಿಕ್ಷಕರಾದ ಗೋಕುಲದ ಮಹಾದೇವಿ ಎಂ., ಅಂಚಟಗೇರಿಯ ಸುಮಂಗಲಾ ಅರ್ಕಸಾಲಿ, ರೇವಡಿಹಾಳದ ಭಾರತಿ ಸಾಂಬ್ರಾಣಿ, ಗೋಕುಲ ರಸ್ತೆ ಸರಸ್ವತಿ ವಿದ್ಯಾಮಂದಿರದ ಮಮತಾ, ಗಿರೀಶ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಶೈಲಾ ಹಿರೇಮಠ, ಚೇತನಾ ಪಬ್ಲಿಕ್ ಸ್ಕೂಲ್ನ ಜಯಶ್ರೀ ಹಿರೇಮಠ, ಮಂಟೂರಿನ ದ್ರಾಕ್ಷಾಯಣಿ ಕುಂಬಾರ, ಗೋಕುಲದ ರಮಾಮಣಿ, ಲೋಹಿಯಾ ನಗರದ ತನು ಅವರನ್ನು ರಾಜಯೋಗಿನಿ ಬ್ರಹ್ಮಕುಮಾರಿ ಲತಾ ಈಶ್ವರೀಯ ಸನ್ಮಾನವನ್ನು ಮಾಡಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಹನಾ, ತನು ಹಾಗೂ ಕೀರ್ತಿ ಅವರನ್ನು ಸಹ ಸನ್ಮಾನಿಸಲಾಯಿತು.